ವಿಟ್ಲ ಸಿಡಿಪಿಓ ಕಚೇರಿ – ಹೊರಗುತ್ತಿಗೆ ಟೆಂಡರ್ ಆಹ್ವಾನ
ಮಂಗಳೂರು ಸೆ 18: ವಿಟ್ಲ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಯ ಸೇವೆಯನ್ನು ಬಾಹ್ಯ ಮೂಲದ ಏಜೆನ್ಸಿಗಳ ಮೂಲಕ ಪಡೆಯುವ ಬಗ್ಗೆ ಟೆಂಡರ್ ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಟೆಂಡರ್ ಅರ್ಜಿಗಳನ್ನು ಸ್ವೀಕರಿಸಲು ಸೆಪ್ಟೆಂಬರ್ 24 ರಂದು ಸಂಜೆ 5.30 ಗಂಟೆ ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವಿಟ್ಲ, ರಿಹಾ ಪ್ಲಾನೆಟ್ ಚಂದ್ರನಾಥ ಬಸದಿ ಎದುರು ಪುತ್ತೂರು ರಸ್ತೆ ಬಂಟ್ವಾಳ, ದೂರವಾಣಿ ಸಂಖ್ಯೆ 08255-238080 ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.