ಮಾರ್ಚ 12 ರಂದು ಜಿಲ್ಲೆಯ 26 ನ್ಯಾಯಾಲಯಗಳಲ್ಲಿ ಲೋಕ ಅದಾಲತ್
ಕಾರವಾರ ಮಾರ್ಚ್ 02, 2022: ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕಡಿಮೆ ಮಾಡಲು ಹಾಗೂ ಶೀಘ್ರದಲ್ಲಿ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಮಾರ್ಚ 12 ರಂದು ಜಿಲ್ಲೆಯ 26 ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ನ್ನು ಹಮ್ಮಿಕೋಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನೂ ಸೇವಾ ಪ್ರಾಧಿಕಾರದ ಸದಸ್ಯ ಕಾಆರ್ಯದರ್ಶಿ ಎನ್. ಸಂತೋಷಕುಮಾರ ಶೆಟ್ಟಿ ಹೇಳಿದರು.
ನಗರದ ಜಿಲ್ಲಾ ನ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ನ್ಯಾಯಾಲಯದ ಹೊರೆ ಕಡಿಮೆ ಮಾಡುವದಕ್ಕಾಗಿ ವರ್ಷದಲ್ಲಿ ನಾಲ್ಕು ಬಾರಿ ಲೋಕ್ ಅದಾಲತ್ ನ್ನು ಹಮ್ಮಿಕೊಳ್ಳಲಾಗುತ್ತಿದ್ದು, 2022-23 ನೇ ವರ್ಷದ ಪ್ರಥಮ ಲೋಕ ಅದಾಲತ್ ಇದಾಗಿರುತ್ತದೆ. ಈ ಅದಾಲತ್ನಲ್ಲಿ ಸಿವಿಲ್ ಸ್ವರೂಪದ ಎಲ್ಲಾ ಪ್ರಕರಣಗಳನ್ನು, ಘನಘೋರ ಕ್ರಿಮಿನಲ್ ಪ್ರಕರಣಗಳನ್ನು ಹೊರತು ಪಡಿಸಿ ಸಣ್ಣ ಪುಟ್ಟ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ, ಮೊಟಾರು ವಾಹನ ಪ್ರಕರಣ, ಜಿಲ್ಲೆಯಲ್ಲಿ ಕೊಂಕಣ ರೈಲ್ವೆ ಮತ್ತು ಸೀ ಬರ್ಡ್ ಯೋಜನೆಯ ನಿರಾಶ್ರಿತರಿಗೆ ಭೂ ಪರಿಹಾರ ನೀಡುವಲ್ಲಿ ವಿಳಂಭವಾಗಿರುವ ಪ್ರಕರಣ ಹಾಗೂ ವೈವಾಹಿಕ ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಗುವುದು ಎಂದರು.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 35,459 ಬಾಕಿ ಇರುವ ಪ್ರಕರಣಗಳಿದ್ದು, ಇವುಗಳಲ್ಲಿ 12,887 ಪ್ರಕರಣಗಳು ರಾಜಿಗೆ ಸಂಧಾನಕ್ಕೆ ಯೋಗ್ಯವಾದ ಪ್ರಕರಣಗಳಾಗಿರುತ್ತವೆ. ಈ ಪೈಕಿ 157 ರಾಜಿಯಾಗತಕ್ಕ ಅಪರಾಧಿಕ ಪ್ರಕರಣಗಳು, 1545 ಚೆಕ್ ಅಮಾನ್ಯದ ಪ್ರಕರಣ, 104 ಬ್ಯಾಂಕ್ ಪ್ರಕರಣ, 211 ಮೊಟಾರು ಅಪಘಾತ ಪರಿಹಾರ,ನ್ಯಾಯಾಧಿಕರಣ ಪ್ರಕರಣ, 2 ಉದ್ಯೋಗ, ಕಾರ್ಮಿಕ ವಿವಾದಗಳು ಮತ್ತು ಕೈಗಾರಿಕಾ ಕಾರ್ಮಿಕರ ಪ್ರಕರಣ, 22 ವೈವಾಹಿಕ ಪ್ರಕರಣ, ಭೂ ಸ್ವಾಧೀನ ಸಂಬಂಧಿಸಿದ 21, 1761 ಇತರೆ ಸಿವಿಲ್ ಪ್ರಕರಣ ಹಾಗೂ 2264 ಇತರೆ ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು 6087 ಪ್ರಕರಣಗಳನ್ನು ಲೋಕದಾಲತ್ನಲ್ಲಿ ರಾಜಿ ಸಂಧಾನಕ್ಕೆ ಗುರುತಿಸಲಾದ ಪ್ರಕರಣಗಳಾಗಿರುತ್ತವೆ. ಈ ಎಲ್ಲಾ ಪ್ರಕರಣಗಳನ್ನು ಒಂದೇ ದಿನದಲ್ಲಿ ರಾಜಿ ಸಂಧಾನ ಮಾಡದೇ ನಿಗದಿ ಪಡಿಸಿದ ದಿನಾಂಕದ ಮಧ್ಯ ಮಧ್ಯ ಉಭಯ ಪಕ್ಷಗಾರರೊಂದಿಗೆ ಸಮಾಲೋಚನೆ ನಡೆಸಿ ರಾಜಿ ಸಂಧಾನನದ ಪ್ರಕ್ರೀಯೆ ನಡೆಸಲಾಗುತ್ತಿದೆ ಎಂದರು.