ಕಾರವಾರ : ಜ.29 ರಂದು ಕೋವಿಡ್-19 ಲಸಿಕಾ ಮೇಳ
ಕಾರವಾರ ಜ. 28, 2022: ತಾಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಜ.29 ರಂದು ಕೋವಿಡ್-19 ಲಸಿಕಾ ಮೇಳವನ್ನು ಆಯೋಜಿಸಲಾಗಿದೆ.
ಇದುವರೆಗೆ ಲಸಿಕೆ ಪಡೆಯದೇ ಇರುವವರು ಹಾಗೂ ಮೊದಲನೆ ಲಸಿಕೆ ಪಡೆದು ನಿಗದಿತ ಅವಧಿ ಪುರ್ಣಗೊಂಡಂತಹ ವ್ಯಕ್ತಿಗಳು ಎರಡನೆ ಲಸಿಕೆಯನ್ನು ಪಡೆಯಲು ಈ ಮೇಳದಲ್ಲಿ ಅವಕಾಶ ಇರುತ್ತದೆ.
ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಕೋವಿಡ್ ವಾರ್ ರೂಂ ದೂರವಾಣಿ ಸಂಖ್ಯೆ 08382-223350 ಅಥವಾ 8147745176 ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರವಾರದ ತಹಶಿಲ್ದಾರ ನಿಶ್ಚಲ್ ಎಫ್ ನರೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.