ಖಾದಿ ಗ್ರಾಮೋದ್ಯೋಗ ಜಿಲ್ಲಾವಾರು ಘಟಕ ಸ್ಥಾಪನೆ: ಅರ್ಜಿ ಆಹ್ವಾನ
ಕಾರವಾರ ಡಿ.17, 2021: 2021- 22 ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಪಿಎಮ್ಇಜಿಪಿ ಯೋಜನೆಯಡಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಜಿಲ್ಲಾವಾರು ಘಟಕಗಳನ್ನು ಸ್ಥಾಪಿಸಿದ್ದು, ಈ ಯೋಜನೆಯಡಿ ಸ್ಥಾಪಿಸಿದ ಘಟಕಗಳಿಗೆ ಶೇಕಡಾ 25 ರಿಂದ 35 ರವರೆಗೆ ಸಬ್ಸಿಡಿ ಹಣ ಪಡೆಯಲು ಅವಕಾಶವಿರುತ್ತದೆ.
ಸಣ್ಣ ಕೈಗಾರಿಕೆ ಮತ್ತು ಮಧ್ಯಮ ಕೈಗಾರಿಕೆ( ಉತ್ಪದನಾ ಘಟಕ ಮತ್ತು ಸೇವಾ ಘಟಕ)ಯನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲು ಆಸಕ್ತ ಇರುವ ನಿರುದ್ಯೋಗಿ ಯುವಕ ಯುವತಿಯರು ಪಿಎಮ್ಇಜಿಪಿ ಆನಲೈನ ವೆಬ್ ಸೈಟ್ https://www.kviconline.gov.in/pmegpeportal/pmegphome/index.jsp ಮೂಲಕ ಅರ್ಜಿ ಸಲ್ಲಿಸಿ ಹಾರ್ಡ ಪ್ರತಿಯನ್ನು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಕಚೇರಿ ಡಾ.11 ಪಿಕಳೆ ರಸ್ತೆ ಕಾರವಾರ ವಿಳಾಸಕ್ಕೆ ಕಳಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08382-226506/9480825632/9480825644ಕ್ಕೆ ಸಂಪರ್ಕಿಸಲು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.