ವಿಕಲಚೇತನ ಕಾರ್ಡ್ ವಿತರಣೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ

 ವಿಕಲಚೇತನ ಕಾರ್ಡ್ ವಿತರಣೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ
Share this post


ಕಾರವಾರ ಆ. 28, 2021: ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ವಿಕಲಚೇತನರಿಗಾಗಿ ಯು.ಡಿ. ಐ. ಡಿ (UDID) ಕಾರ್ಡ್ ವಿತರಣೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.

ಆ.30 ರಂದು ಭಟ್ಕಳ ತಾಲ್ಲೂಕು ಆಸ್ಪತ್ರೆ, 31ರಂದು ಕುಮಟಾ ತಾಲ್ಲೂಕು ಆಸ್ಪತ್ರೆ , ಸೆಪ್ಟೆಂಬರ್ 1ರಂದು ಯಲ್ಲಾಪುರ, 2ರಂದು ಮುಂಡಗೋಡ, 3 ರಂದು ಶಿರಸಿ, 4ರಂದು ಅಂಕೋಲಾ ಹಾಗೂ 4 ರಂದು ಹಳಿಯಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಕಾರ್ಡ್ ವಿತರಣೆ ಮತ್ತು ವೈದ್ಯಕೀಯ ಶಿಬಿರ ನಡೆಯಲಿದೆ.

ಜೋಯಿಡಾ 66, ದಾಂಡೇಲಿ 35 ಹಾಗೂ ಹೊನ್ನಾವರ ತಾಲ್ಲೂಕಿನಲ್ಲಿ 113 ಜನರಿಗೆ ಈಗಾಗಲೇ ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಲಾಗಿದ್ದು, ತಪಾಸಣೆಗೊ ಳಗೊಂಡವರೆಲ್ಲರ ಯುಡಿಐಡಿ ಕಾರ್ಡಗಳನ್ನು ಪ್ರಿಂಟ್‍ಗೊಸ್ಕರ ಪ್ರಿಂಟಿಂಗ್ ಏಜೆನ್ಸಿಯವರಿಗೆ ರವಾನಿಸಲಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!