ಆ.10ರಂದು ಉಡುಪಿಯ ವಿದ್ಯಾರ್ಥಿಗಳಿಂದ  ಅಪರೂಪದ ಒಡ್ಡೋಲಗ- ತೆರೆ ಕಲಾಸುಗಳ ಅಪೂರ್ವ ಸಂಗಮ

 ಆ.10ರಂದು ಉಡುಪಿಯ ವಿದ್ಯಾರ್ಥಿಗಳಿಂದ  ಅಪರೂಪದ ಒಡ್ಡೋಲಗ- ತೆರೆ ಕಲಾಸುಗಳ ಅಪೂರ್ವ ಸಂಗಮ
Share this post

ಉಡುಪಿ, ಆ 06, 2021: ಯಕ್ಷಗುರು ರಾಕೇಶ್ ರೈ ಅಡ್ಕ ನೇತೃತ್ವದ  ಸನಾತನ ಯಕ್ಷಾಲಯ ಮಂಗಳೂರು ಸಂಸ್ಥೆಯು ತನ್ನ 12ನೇ ವಾರ್ಷಿಕೋತ್ಸವವನ್ನು ಆಗಸ್ಟ್ 10 ರಂದು ಆಚರಿಸಲಿದೆ.

ಈ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಜೆ ಘಂಟೆ 4.00 ರಿಂದ ಪೂರ್ವರಂಗ ಮತ್ತು 4.30 ರಿಂದ  ಪಣಂಬೂರು ವೆಂಕಟ್ರಾಯ  ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇದರ ವಿದ್ಯಾರ್ಥಿಗಳಿಂದ ಅತೀ ಅಪರೂಪವಾಗಿ  ಕಾಣಸಿಗುವ  ಒಡ್ಡೋಲಗಗಳು  ಹಾಗೂ ತೆರೆ ಕಲಾಸುಗಳ ಪ್ರದರ್ಶನ  ಕಾರ್ಯಕ್ರಮ ನಡೆಯಲಿದೆ. 

ಇತ್ತೀಚೆಗೆ ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರ ಅನುಕೂಲಕ್ಕೆ ತಕ್ಕಂತೆ ಕಾಲಮಿತಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಪೂರ್ವರಂಗ ಮತ್ತು ಒಡ್ಡೋಲಗಗಳು ಕಾಣೆಯಾಗುತ್ತಿವೆ.  ಯಕ್ಷಗುರು ರಾಕೇಶ್ ರೈ ಅಡ್ಕರವರು ತನ್ನ ವಿದ್ಯಾರ್ಥಿಗಳಿಂದ ಒಂದೇ ವೇದಿಕೆಯಲ್ಲಿ ಪೂರ್ವರಂಗ ಮತ್ತು  ವಿವಿಧ ಬಗೆಯ ಒಡ್ಡೋಲಗಗಳು  ಹಾಗೂ ತೆರೆ ಕಲಾಸುಗಳ ಅಪೂರ್ವ ಪ್ರದರ್ಶನವನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದಾರೆ. 

ತದನಂತರ  ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ನಿಂದಾಗಿ ಇವೆಲ್ಲ  ಕಾರ್ಯಕ್ರಮಗಳು “ಮಲ್ಯಾಡಿ ಲೈವ್” ಯೂ ಟ್ಯೂಬ್ ಚಾನೆಲ್ ನಲ್ಲಿ ನೇರವಾಗಿ  ಪ್ರಸಾರವಾಗಲಿದೆ.

Subscribe to our newsletter!

Other related posts

error: Content is protected !!