ಜಾನುವಾರುಗಳ ವಾರಸುದಾರರಿಗೆ ಸೂಚನೆ
ಉಡುಪಿ ಜೂನ್ 30, 2021: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಜೂನ್ 27 ರಂದು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಗುಲ್ವಾಡಿ ಕಾಂಡ್ಲಗದ್ದೆ ಎಂಬಲ್ಲಿ ದಾಳಿ ನಡೆಸಿ ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ 23 ಜಾನುವಾರುಗಳನ್ನು ಮಹಜರಿನ ಮೂಲಕ ಸ್ವಾಧೀನಕ್ಕೆ ಪಡೆದುಕೊಂಡು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುಂದಾಪುರ ತಾಲೂಕು ಅಸೋಡು ಗ್ರಾಮದ ಕಾಮಧೇನು ಗೋಸಂರಕ್ಷಣಾ ಕೇಂದ್ರಕ್ಕೆ ರವಾನಿಸಿರುತ್ತಾರೆ.
ಆರೋಪಿತರ ವಿರುದ್ಧ ಠಾಣೆಯಲ್ಲಿ ಕಲಂ 379 ಐಪಿಸಿ ಮತ್ತು ಕಲಂ 11(1)(ಡಿ) ಪ್ರಾಣಿಹಿಂಸೆ ನಿಷೇಧ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ಸದ್ರಿ 23 ಜಾನುವಾರುಗಳನ್ನು ಕಳೆದುಕೊಂಡವರು ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.