ಮಕ್ಕಳ ಸಮೀಕ್ಷೆಗೆ ಸಹಕರಿಸುವಂತೆ ಮನವಿ

 ಮಕ್ಕಳ ಸಮೀಕ್ಷೆಗೆ  ಸಹಕರಿಸುವಂತೆ ಮನವಿ
Share this post

ಮಂಗಳೂರು, ಮಾರ್ಚ್ 12, 2021: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗೆ ಉಳಿದ 1 ರಿಂದ 14 ವರ್ಷದ ಮಕ್ಕಳ ಸಮೀಕ್ಷಾ ವರದಿಯನ್ನು ಸರಕಾರವು ಉಚ್ಚ ನ್ಯಾಯಲಯಕ್ಕೆ ಸಲ್ಲಿಸಬೇಕಾಗಿರುತ್ತದೆ.

ಈಗಾಗಲೇ ನಗರ ಸಂಸ್ಥೆಗಳು ಸರ್ವೇ ಕಾರ್ಯ ಪ್ರಾರಂಭಿಸಿದ್ದು, ತ್ವರಿತವಾಗಿ ಸರ್ವೇ ಮಾಡಿ ಮಾರ್ಚ್ 30 ರೊಳಗೆ ಪೂರ್ಣಗೊಳಿಸಲು ನಿರ್ದೇಶಕರು, ಪೌರಾಡಳಿತ ಬೆಂಗಳೂರು ಇವರು ಸೂಚನೆ ನೀಡಿರುತ್ತಾರೆ.

ಆದ್ದರಿಂದ ಪೋಷಕರು ಯಾವುದೇ ಸಂಶಯಪಡದೇ ರೇಶನ್ ಕಾರ್ಡ್ ಮತ್ತು ಮಕ್ಕಳ ಆಧಾರ್ ಕಾರ್ಡ್ ನೀಡಿ ಸಹಕರಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!