ಹಟ್ಟಿಕೇರಿ ಶ್ರೀ ನಾಗಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮುತ್ತೈದೆ ಹುಣ್ಣುಮೆ ಮಹೋತ್ಸವ
ಕಾರವಾರ, ಜನವರಿ 23, 2021: ಜನವರಿ 28 ರಂದು ಹಟ್ಟಿಕೇರಿ ಗ್ರಾಮದ ಶ್ರೀ ನಾಗಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ””ಮುತ್ತೈದೆ ಹುಣ್ಣುಮೆ “” ಕಾರ್ಯಕ್ರಮ ನಡೆಯಲಿದೆ.
ಅಂದು ಶ್ರೀ ದೇವರಿಗೆ ವಿಷೇಶ ಪೂಜೆ ಪುನಸ್ಕಾರ ನಡೆಯಲಿದ್ದು ಶ್ರೀ ದೇವರ ಸೇವೆಗಳು ಮಧ್ಯಾಹ್ನ 1ಗಂಟೆಯಿಂದ ಆರಂಭಗೊಳ್ಳಲಿವೆ. ಭಕ್ತಾದಿಗಳಿಗೆ ಹೂ, ಹಣ್ಣು ಕಾಯಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಪಾಲಿಸಿಕೊಂಡು ಶ್ರೀ ದೇವರಿಗೆ ಸೇವೆ ಸಲ್ಲಿಸಿ ದರ್ಶನ ಪಡೆಯಬಹುದು ಎಂದು ಶ್ರೀ ರೇಣುಕಾದೇವಿ ದೇವಸ್ಥಾನ ಅಭಿವೃದ್ಧಿ ಹಾಗೂ ಉತ್ಸವ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಭಕ್ತಾದಿಗಳಿಗೆ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯ ತನಕ ಅನ್ನ ಪ್ರಸಾದ ವಿತರಿಸಲಾಗುವುದು, ಹಾಗೂ ಸಂಜೆ 5 ಗಂಟೆಗೆ ಶ್ರೀ ದೇವಿಯ ಪಲ್ಲಕ್ಕಿ ಯ ಮೆರವಣಿಗೆಯು ಹಟ್ಟಿಕೇರಿಯ ಶ್ರೀ ಹಟ್ಟಿಕೇಶ್ವರ ದೇವಸ್ಥಾನದ ತನಕ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 7892664950, 8277225544 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.