ಮಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ನೋ ಪಾರ್ಕಿಂಗ್ ವಲಯ ಘೋಷಣೆ
ಮಂಗಳೂರು ಡಿಸೆಂಬರ್ 28, 2020 : ಮಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನಗಳ ಅನಧಿಕೃತ ಪಾರ್ಕಿಂಗ್‍ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಿವಿಧ ಸ್ಥಳಗಳನ್ನು ನೋ ಪಾರ್ಕಿಂಗ್ ವಲಯಗಳೆಂದು ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಹಾಗೂ ಪೋಲಿಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಆದೇಶಿಸಿರುತ್ತಾರೆ.
ನೋ-ಪಾರ್ಕಿಂಗ್ ವಲಯಗಳು ಇಂತಿವೆ:-
ಸಂಚಾರ ಪೂರ್ವ ಠಾಣೆ:
- ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಕಡೆಗೆ ಹೋಗುವ ರಸ್ತೆಯ ಬಲಬದಿಯಲ್ಲಿ ಸುಮಾರು 550 ಮೀಟರವರೆಗೆ
- ಕಲೆಕ್ಟರ್ಸ್ ಗೇಟ್ ವೃತ್ತದಿಂದ ಬಲ್ಮಠ ರಸ್ತೆಯ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಕಡೆಗೆ ಕರ್ನಾಟಕ ಕ್ರಿಶ್ಚಿಯನ್ ಇನ್ಸ್ಟಿಟ್ಯೂಟ್ ಸಂಸ್ಥೆಯ ದ್ವಾರದ ತನಕ ಸುಮಾರು 200 ಮೀಟರವರೆಗೆ ರಸ್ತೆಯ ಎಡಬದಿಯಲ್ಲಿ,
- ಗೋಲ್ಡ್ ಫಿಂಚ್ ಹೋಟೆಲ್ ಪಕ್ಕದ ಬಲ್ಮಠ ಬ್ರಿಡ್ಜ್ ನಿಂದ ಎಂಜೇಸ್ ಕಾಂಪ್ಲೇಕ್ಸ ಕಲೆಕ್ಟರ್ಸ್ ಗೇಟ್‍ವರೆಗೆ ರಸ್ತೆಯ ಎಡಬದಿಯಲ್ಲಿ ಸುಮಾರು 200 ಮೀಟರವರೆಗೆ,
- ಮಿಲಾಗ್ರೀಸ್ ಮ್ಯಾನ್ಶನ್ ಕಟ್ಟಡದ ಬಲಬದಿ ಅಂಚಿನಿಂದ ಹಂಪನಕಟ್ಟೆ ವೃತ್ತದ ತನಕ ರಸ್ತೆಯ ಎಡ ಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಫಳ್ನೀರ್ ರಸ್ತೆಯ ಕೊಯೆಲ್ಲೋ ಲೇನ್ ಅಡ್ಡರಸ್ತೆಯಿಂದ ಪ್ರಾರಂಭವಾಗಿ ಅವೆರಿ ಜಂಕ್ಷನ್ ಮುಖಾಂತರ ಹಂಪನಕಟ್ಟೆ ವರೆಗೆ ಸುಮಾರು 800 ಮೀಟರ್‍ವರೆಗೆ ರಸ್ತೆಯ ಎಡಬದಿಯಲ್ಲಿ,
- ಬಿಕರ್ನಕಟ್ಟೆ ನಂತೂರು ರಾಷ್ಟ್ರೀಯ ಹೆದ್ದಾರಿಯ ಬಾಲಯೇಸು ದೇವಾಲಯದ ಮುಖ್ಯದ್ವಾರದಿಂದ ಬಾಲಯೇಸು ದೇವಾಲಯದವರೆಗೆ ಸುಮಾರು 100 ಮೀಟರ್ ವರೆಗೆ ರಸ್ತೆಯ ಎರಡೂ ಬದಿ,
- ಕರಾವಳಿ ವೃತ್ತದಿಂದ ಪ್ರಾರಂಭವಾಗಿ ವಾಸ್ಲೇನ್ನ ಒಂದನೇ ಅಡ್ಡರಸ್ತೆವರೆಗೆ ಇರುವ ಕಲ್ಪನಾ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 500 ಮೀಟರ್‍ವರೆಗೆ,
- ಕರಾವಳಿ ಜಂಕ್ಷನ್‍ನಿಂದ ಪಂಪ್ವೆಲ್ ಕಡೆಗೆ ಹೋಗುವ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಕುದ್ಕೋರಿ ಗುಡ್ಡೆ ಕ್ರಾಸ್‍ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 200 ಮೀಟರ್ ವರೆಗೆ ವಾಹನ ನಿಲುಗಡೆ ನಿಷೇಧಿಸಿದೆ.
- ಮಂಗಳೂರು ನಗರದ ಕರಂಗಲ್ಪಾಡಿ ಸಿ.ಜೆ. ಕಾಮತ್ ಕ್ರಾಸ್ ರಸ್ತೆಯಿಂದ ತಂದೂರು ಬಾರ್ ಎದುರು ಶ್ರೀದೇವಿ ನಸಿರ್ಂಗ್ ಹೋಂ ಕಡೆಗೆ ಹೋಗುವ ಕ್ರಾಸ್ ರಸ್ತೆವರೆಗೆ ರಸ್ತೆಯ ಎಡ ಬದಿಯಲ್ಲಿ ಸುಮಾರು 150 ಮೀಟರ್‍ವರೆಗೆ,
- ಕರಂಗಲ್ಪಾಡಿ ಕುದ್ಮಲ್ ರಂಗರಾವ್ ರಸ್ತೆಯಿಂದ ಕೋರ್ಟ್ ಕಡೆಗೆ ಹೋಗುವ ಕೋರ್ಟ್ ರಸ್ತೆಯ ಬಲಬದಿಯಲ್ಲಿ ಸುಮಾರು 200 ಮೀಟರ್ ವರೆಗೆ ಹಾಗೂ ಎಡಬದಿಯಲ್ಲಿ 20 ಮೀಟರ್‍ವರೆಗೆ,
- ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಪಿ.ವಿ.ಎಸ್ ವೃತ್ತದ ವರೆಗೆ ಕುದ್ಮಲ್ ರಂಗರಾವ್ ರಸ್ತೆಯಲ್ಲಿ ಸುಮಾರು 800 ಮೀಟರ್ ರಸ್ತೆಯ ಎಡಬದಿಯಲ್ಲಿ,
- ಎ. ಬಿ. ಶೆಟ್ಟಿ ವೃತ್ತದಿಂದ ಟೆಲಿಕಾಂ ಕಛೇರಿ ಕಡೆಗೆ ಹೋಗುವ ಓಲ್ಡ್ ಕೆಂಟ್ ರಸ್ತೆಯ ಎಡಬದಿಯಲ್ಲಿ ಸುಮಾರು 300 ಮೀಟರ್,
- ಮಂಗಳೂರು ನಗರದ ಹಂಪನಕಟ್ಟೆ ಜಂಕ್ಷನ್ ನಿಂದ ಮುತ್ತಪ್ಪ ಗುಡಿ ಜಂಕ್ಷನ್‍ವರೆಗೆ ರಸ್ತೆಯ ಬಲಬದಿಯಲ್ಲಿ ಸುಮಾರು 200 ಮೀಟರ್‍ವರೆಗೆ,
- ಡಾ. ಬಿ. ಆರ್. ಅಂಬೇಡ್ಕರ್ ಜಂಕ್ಷನ್ ಬಸ್ ಬೇ ಬಳಿಯ ಮ್ಯಾಪಲ್ ಶೋರೂಮ್‍ನಿಂದ ಮೋಟಾರೋಲಾ ಹೆಲ್ಮೆಟ್ ಶಾಪ್ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಎ. ಬಿ. ಶೆಟ್ಟಿ ವೃತ್ತದಿಂದ ಮಂಗಳಾದೇವಿ ದೇವಸ್ಥಾನ ರಸ್ತೆಯಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಕಾಪೆರ್Çೀರೇಷನ್ ಬ್ಯಾಂಕ್) ವರೆಗೆ ರಸ್ತೆಯ ಎಡಬದಿಯಲ್ಲಿ ಸುಮಾರು 200 ಮೀಟರ್,
- ಕಂಕನಾಡಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುವ ಮಾರುಕಟ್ಟೆಯ ಪಕ್ಕದಲ್ಲಿರುವ ಒಳ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ .
ಸಂಚಾರ ಪಶ್ಚಿಮ ಠಾಣೆ:
- ಹ್ಯಾಮಿಲ್ಟನ್ ವೃತ್ತದಿಂದ ಜಿಲ್ಲಾಧಿಕಾರಿಯವರ ಕಛೇರಿ ಕಂಪೌಂಡ್‍ನ ಮುಖ್ಯ ದ್ವಾರದವರೆಗೆ ರಸ್ತೆಯ ಎಡ ಬದಿಯಲ್ಲಿ ಸುಮಾರು 50 ಮೀಟರ್ ವರೆಗೆ,
- ಪೆÇೀರ್ಟ್ ರೋಡ್ ರಸ್ತೆಯ ಬದ್ರಿಯಾ ಜಂಕ್ಷನ್‍ನಿಂದ ಪೆÇೀರ್ಟ್ ಜಂಕ್ಷನ್ ತನಕ ಸುಮಾರು 50 ಮೀಟರ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ,
- ಮಂಗಳೂರು ನಗರದ ಮಣ್ಣಗುಡ್ಡೆ ವಾರ್ಡ ನಂಬ್ರ 28ರ ಮುಖ್ಯ ರಸ್ತೆಯ 2ನೇ ಮತ್ತು 3ನೇ ಅಡ್ಡರಸ್ತೆಗಳ ಉದ್ದಕ್ಕೂ ರಸ್ತೆಯ ಬದಿಯಲ್ಲಿ,
- ಕೊಟ್ಟಾರ ಚೌಕಿ ಜಂಕ್ಷನ್ ನಿಂದ ಕೋಡಿಕಲ್ ಕ್ರಾಸ್ ವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಬದಿಯಲ್ಲಿ ಸುಮಾರು 250 ಮೀಟರ್ ವರೆಗೆ,
- ಕ್ಲಾಕ್ ಟವರ್ ಜಂಕ್ಷನ್ ಬಳಿಯ ಮೈದಾನ 1ನೇ ಕ್ರಾಸ್ ನಿಂದ ಕೃಷ್ಣ ಭವನ (ಕೆ.ಬಿ) ಕಟ್ಟೆ ಜಂಕ್ಷನ್ ವರೆಗೆ ರಸ್ತೆಯ ಎಡ ಬದಿಯಲ್ಲಿ ಸುಮಾರು 150 ಮೀಟರ್ ವರೆಗೆ,
- ಕೃಷ್ಣ ಭವನ (ಕೆ.ಬಿ) ಕಟ್ಟೆ ಜಂಕ್ಷನ್‍ನಿಂದ ಜನತಾ ಬಜಾರ್ ಬಲಭಾಗದ ಕ್ರಾಸ್ ವರೆಗಿನ ರಸ್ತೆಯ ಎಡ ಬದಿಯಲ್ಲಿ ಸುಮಾರು 150 ಮೀಟರ್ ವರೆಗೆ,
- ಕೃಷ್ಣ ಭವನ (ಕೆ.ಬಿ) ಕಟ್ಟೆ ಜಂಕ್ಷನ್ನಿಂದ ಪಿಲಿಕ್ಸ್ ಪೈ ಜಂಕ್ಷನ್ ವರೆಗೆ ರಸ್ತೆಯ ಬಲಬದಿಯಲ್ಲಿ ಸುಮಾರು 50 ಮೀಟರ್‍ವರೆಗೆ,
- ಗಣಪತಿ ಹೈಸ್ಕೂಲ್ ಕ್ರಾಸ್ ಜಂಕ್ಷನ್ ರಸ್ತೆಯಿಂದ ಹೋಟೆಲ್ ವಿಮಲೇಶ್ ಜಂಕ್ಷನ್ (ಶರವು ದೇವಸ್ಥಾನ ಕ್ರಾಸ್ ರಸ್ತೆ) ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಹಂಪನಕಟ್ಟೆ ಜಂಕ್ಷನ್ ನಿಂದ ಕೆ.ಎಸ್.ರಾವ್ ರಸ್ತೆಯಾಗಿ ಪಿ.ವಿ.ಎಸ್. ಜಂಕ್ಷನ್ ತನಕ ಮತ್ತು ಪಿ.ವಿ.ಎಸ್ ಜಂಕ್ಷನ್ ನಿಂದ ಎಂ.ಜಿ. ರಸ್ತೆ ಯಲ್ಲಿ ಬಲ್ಲಾಳ ಭಾಗ ಜಂಕ್ಷನ್ ತನಕ ರಸ್ತೆಯ ಎರಡೂ ಬದಿಯಲ್ಲಿ,
- ಲಾಲ್‍ಬಾಗ್ ಜಂಕ್ಷನ್ನಲ್ಲಿರುವ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಮುಖ್ಯ ದ್ವಾರದಿಂದ ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ (ಭಾರತ್ ಮಾಲ್) ವರೆಗಿನ ರಸ್ತೆಯ ಎಡ ಬದಿಯಲ್ಲಿ ಸುಮಾರು 130 ಮೀಟರ್‍ವರೆಗೆ,
- ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಲಾಲ್‍ಬಾಗ್ ಕಡೆಗೆ ಸಾಗುವ ರಸ್ತೆಯಲ್ಲಿನ ಲಾಲ್‍ಬಾಗ್ ಜಂಕ್ಷನ್‍ನಲ್ಲಿರುವ ಸಾಯಿಬಿನ್ ಕಾಂಪ್ಲೆಕ್ಸ್ ಎಂಬ ವಾಣಿಜ್ಯ ಕಟ್ಟಡದ ಎದುರುಗಡೆಯಿಂದ ಎಡ ತಿರುವು ಮುಕ್ತವಾಗಿರುವ ರಸ್ತೆಯಲ್ಲಿ ಸುಮಾರು 130 ಮೀಟರ್ ವರೆಗೆ ನೆಹರು ಅವೆನ್ಯೂ ಕ್ರಾಸ್ ಜಂಕ್ಷನ್ ತನಕ ರಸ್ತೆಯ ಎಡ ಬದಿಯಲ್ಲಿ,
- ಬಾಲಾಜಿ ಜಂಕ್ಷನ್ನಿಂದ ಲೋವರ್ ಕಾರ್‍ಸ್ಟ್ರೀಟ್ ಜಂಕ್ಷನ್‍ನಲ್ಲಿರುವ ಗಿರಿರಾಜ್ ಟವರ್‍ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಸೈಂಟ್ ಪೌಲ್ ಚರ್ಚ (ಎಸ್.ಪಿ) ವೃತ್ತದಿಂದ ಲೇಡಿಗೋಶನ್ ಮುಖ್ಯ ರಸ್ತೆಯವರೆಗೆ ಸಾಗಿರುವ ಅಡ್ಡ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಲೇಡಿಗೋಶನ್ ಜಂಕ್ಷನ್‍ನಿಂದ ಸೆಂಟ್ರಲ್ ಮಾರ್ಕೆಟ್ ಬಳಿ ಇರುವ ಕಲ್ಪನಾ ಸ್ವೀಟ್ಸ್ ಅಂಗಡಿಯ ಎದುರು ರಸ್ತೆಯವರೆಗೆ ರಸ್ತೆಯ ಎಡಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಹ್ಯಾಮಿಲ್ಟನ್ ಜಂಕ್ಷನ್‍ನಿಂದ ಸೈಂಟ್ ಪೌಲ್ ಚರ್ಚ (ಎಸ್.ಪಿ) ಸರ್ಕಲ್ ತನಕದ ರಸ್ತೆಯ ಎಡ ಬದಿಯಲ್ಲಿ ಸುಮಾರು 50 ಮೀಟರ್ ವರೆಗೆ ವಾಹನ ನಿಲುಗಡೆ ನಿಷೇಧಿಸಿದೆ.
- ಶ್ರೀ ಎಂ. ಲೋಕಯ್ಯ ಶೆಟ್ಟಿ ರಸ್ತೆಯಲ್ಲಿನ ಮಣ್ಣಗುಡ್ಡ ದುರ್ಗಾಮಹಲ್ ಜಂಕ್ಷನ್‍ನಿಂದ ಕೇಂದ್ರೀಯ ಉಗ್ರಾಣ (ವೇರ್ ಹೌಸ್) ಜಂಕ್ಷನ್‍ವರೆಗೆ ರಸ್ತೆಯ ಬಲ ಬದಿಯಲ್ಲಿ ಸುಮಾರು 300 ಮೀಟರ್ ವರೆಗೆ, ದುರ್ಗಾಮಹಲ್ ಜಂಕ್ಷನ್‍ನಿಂದ ಕುಶೆ ಕುಂಜೆ ಅಪಾರ್ಟಮೆಂಟ್‍ಗೆ ಹೋಗುವ 1ನೇ ಕ್ರಾಸ್ ವರೆಗಿನ ರಸ್ತೆಯ ಎಡ ಬದಿಯಲ್ಲಿ ಸುಮಾರು 50 ಮೀಟರ್‍ವರೆಗೆ ದ್ವಿಚಕ್ರ ವಾಹನ ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ .
- ಮಣ್ಣಗುಡ್ಡ ಕುಶೆ ಕುಂಜೆ ಅಪಾರ್ಟಮೆಂಟ್‍ಗೆ ಹೋಗುವ 1ನೇ ಕ್ರಾಸ್ ನಿಂದ ವೇರ್ ಹೌಸ್ ಜಂಕ್ಷನ್ ತನಕ ರಸ್ತೆಯ ಎಡ ಬದಿಯಲ್ಲಿ ಸುಮಾರು 250 ಮೀಟರ್ ವರೆಗೆ ಕಾರುಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ .
- ವೆಂಕಟರಮಣ ದೇವಸ್ಥಾನದಿಂದ ರಥಬೀದಿ ರಸ್ತೆಯ ಬಾಲಾಜಿ ಜಂಕ್ಷನ್‍ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 200 ಮೀಟರ್‍ವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಅಲ್ಟರ್‍ನೇಟಿವ್ ಡೇ ಪಾಕಿರ್ಂಗ್ ಅವಕಾಶ ಮಾಡಿ ವೆಂಕಟರಮಣ ದೇವಸ್ಥಾನದಿಂದ ಬಾಲಾಜಿ ಜಂಕ್ಷನ್ ಕಡೆಗೆ ರಸ್ತೆಯ ಎಡ ಬದಿಯಲ್ಲಿ ಬೆಸ ಸಂಖ್ಯೆಯ ದಿನಾಂಕಗಳಂದು ಹಾಗೂ ಬಲ ಬದಿಯಲ್ಲಿ ಸಮ ಸಂಖ್ಯೆಯ ದಿನಾಂಕಗಳಂದು ಪಾಕಿರ್ಂಗ್ ಮಾಡುವ ಸಂಬಂಧ ಅಲ್ಟರ್ ನೇಟಿವ್ ಡೇ ಪಾಕಿರ್ಂಗ್ ಎಂದು ಘೋಷಿಸಲಾಗಿದೆ.
- ಕೂಳೂರು ಫೆರ್ರಿ ರಸ್ತೆಯಲ್ಲಿನ ಬಾಲಾಜಿ ಜಂಕ್ಷನ್ ನಿಂದ ನ್ಯೂಚಿತ್ರಾ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 150 ಮೀಟರ್‍ವರೆಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಅಲ್ಟರ್‍ನೇಟಿವ್ ಡೇ ಪಾಕಿರ್ಂಗ್‍ಗೆ ಅವಕಾಶ ಮಾಡಿ ಬಾಲಾಜಿ ಜಂಕ್ಷನ್ ನಿಂದ ನ್ಯೂಚಿತ್ರಾ ಜಂಕ್ಷನ್ ವರೆಗೆ ಎಡ ಬದಿಯನ್ನು ಬೆಸ ಸಂಖ್ಯೆ ದಿನಾಂಕಗಳಂದು ಹಾಗೂ ಬಲ ಬದಿಯಲ್ಲಿ ಸಮ ಸಂಖ್ಯೆಯ ದಿನಾಂಕಗಳಂದು ಪಾಕಿರ್ಂಗ್ ಮಾಡುವ ಸಂಬಂಧ ಅಲ್ಟರ್‍ನೇಟಿವ್ ಡೇ ಪಾಕಿರ್ಂಗ್ ಎಂದು ಘೋಷಿಸಲಾಗಿದೆ.
ಸಂಚಾರ ಉತ್ತರ ಠಾಣೆ:
- ಕೆ.ಐ.ಎ.ಡಿ.ಬಿ. ರಸ್ತೆಯ ಜೋಕಟ್ಟೆ ಕ್ರಾಸ್‍ನಿಂದ ಕೆ.ಐ.ಎ.ಡಿ.ಬಿ. ಕಛೇರಿಯವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 150 ಮೀಟರ್‍ವರೆಗೆ,
- ಪಣಂಬೂರು ಎನ್.ಎಮ್.ಪಿ.ಟಿ. ರಸ್ತೆಯ ಡಿಕ್ಸಿ ಕ್ರಾಸ್ ನಿಂದ ಪಣಂಬೂರು ಬೀಚ್ ರಸ್ತೆಯ ಎನ್.ಎಮ್.ಪಿ.ಟಿ. ಕೆ.ಕೆ. ಗೇಟ್‍ವರೆಗೆ ಕಾಂಕ್ರೀಟ್ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 500 ಮೀಟರ್‍ವರೆಗೆ,
- ಪಣಂಬೂರು ಜಂಕ್ಷನ್ ನಿಂದ ಜೋಕಟ್ಟೆ ಕ್ರಾಸ್ ವರೆಗೆ ರಾಷ್ಟ್ರೀಯ ಹೆದ್ದಾರಿ-66 ರ ರಸ್ತೆಯಲ್ಲಿ ಎರಡೂ ಬದಿಯಲ್ಲಿ ಸುಮಾರು 500 ಮೀಟರ್‍ವರೆಗೆ,
- ಬೈಕಂಪಾಡಿ ಜಂಕ್ಷನ್ ನ ಮಿನಕಳಿಯ ಕ್ರಾಸಿನಿಂದ ಚಿತ್ರಾಪುರ ದ್ವಾರದವರೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಡಾಮರು ರಸ್ತೆಯ ಎರಡೂ ಬದಿಯಲ್ಲಿ ಸುಮಾರು 200 ಮೀಟರ್‍ವರೆಗೆ,
- ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ದ್ವಾರದಿಂದ ಚೊಕ್ಕಬೆಟ್ಟು ಕ್ರಾಸ್ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 150 ಮೀಟರ್‍ವರೆಗೆ,
- ಸುರತ್ಕಲ್, ಚೊಕ್ಕಬೆಟ್ಟು ಕ್ರಾಸ್ ನಿಂದ ಬಿ.ಎ.ಎಸ್.ಎಫ್. ಕೆಮಿಕಲ್ ಇಂಡಸ್ಟ್ರೀಯಲ್ ಘಟಕ ಹಾಗೂ ಹೆಚ್.ಪಿ.ಸಿ.ಎಲ್. ಕಂಪನಿ ಮುಖಾಂತರ ಎಂ.ಆರ್.ಪಿ.ಎಲ್.ಗೆ ಹೋಗುವ ರಸ್ತೆಯಲ್ಲಿ ಎಂ.ಆರ್.ಪಿ.ಎಲ್. ಮುಖ್ಯ ದ್ವಾರದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 3 ಕಿ.ಮೀ. ವರೆಗೆ,
- ಮುಲ್ಕಿ ಜಂಕ್ಷನ್ನ ಅಧಿದನ ಹೊಟೇಲ್ ನ ಎಡಬದಿಯಲ್ಲಿರುವ ಬಪ್ಪಬ್ಯಾರಿ ರಸ್ತೆಯು ಪಂಚಮಹಲ್ ರಸ್ತೆಯನ್ನು ಸಂಧಿಸುವವರೆಗಿನ (ಕಡವಿನ ಬಾಗಿಲು ರಸ್ತೆ) ರಸ್ತೆಯ ಎರಡೂ ಬದಿಯಲ್ಲಿ,
- ಪದವಿನಂಗಡಿಯ ಪೆರ್ಲಗುರಿ ಕ್ರಾಸ್ ನಿಂದ ಬೋಂದೆಲ್ ಕಡೆಗೆ ಹೋಗುವ ಪೆರ್ಲಗುರಿ 3ನೇ ಮುಖ್ಯ ರಸ್ತೆಯ ಕ್ರಾಸ್ ನಲ್ಲಿರುವ ಕರ್ನಾಟಕ ಬ್ಯಾಂಕ್ ವರೆಗೆ ರಸ್ತೆಯ ಎಡ ಬದಿಯಲ್ಲಿ ಸುಮಾರು 150 ಮೀಟರ್‍ವರೆಗೆ,
- ಸುರತ್ಕಲ್ ಹಳೆಯ ಅಂಚೆ ಕಛೇರಿ ರಸ್ತೆಯ ಕೋರ್ದಬ್ಬು ದೈವಸ್ಥಾನ ದ್ವಾರದಿಂದ ಶಾರದಾ ಲಾಡ್ಜ್ ಕ್ರಾಸ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 75 ಮೀಟರ್‍ವರೆಗೆ,
- ಸುರತ್ಕಲ್ ಜಂಕ್ಷನ್ ಗುಡ್ಡೆಕೊಪ್ಪಳ ಕ್ರಾಸ್ ನಿಂದ ಸುರತ್ಕಲ್ ಜಂಕ್ಷನ್ ಉಡುಪಿ ಸರ್ವಿಸ್ ಬಸ್ ನಿಲ್ದಾಣದವರೆಗೆ ರಾಷ್ಟ್ರೀಯ ಹೆದ್ದಾರಿ-66 ರ ರಸ್ತೆಯ ಎಡಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ಸುರತ್ಕಲ್ ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ಕ್ರಾಸ್ ನಿಂದ ಸುರತ್ಕಲ್ ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ಸುಮಾರು 200 ಮೀಟರ್‍ವರೆಗೆ,
- ಸುರತ್ಕಲ್ ಜಂಕ್ಷನ್ ನಿಂದ ಗೋವಿಂದದಾಸ್ ಕಾಲೇಜುವರೆಗಿನ ಸರ್ವಿಸ್ ರಸ್ತೆಯಲ್ಲಿ ಸುಮಾರು 200 ಮೀಟರ್‍ವರೆಗೆ, ಕೂಳೂರು ಜಂಕ್ಷನ್ ನಿಂದ ಉಡುಪಿ ರಸ್ತೆ ಕಡೆಯ ಫಲ್ಗುಣಿ ನದಿ ಬ್ರಿಡ್ಜ ವರೆಗೆ ರಸ್ತೆಯ ಎಡಬದಿಯಲ್ಲಿ ಸುಮಾರು 150 ಮೀಟರ್‍ವರೆಗೆ,
- ಕೂಳೂರು ಅಯ್ಯಪ್ಪ ಗುಡಿಯ ಸರ್ವಿಸ್ ರಸ್ತೆಯಿಂದ ಕೂಳೂರು ಜಂಕ್ಷನ್ ವರೆಗಿನ ಸರ್ವಿಸ್ ರಸ್ತೆಯಲ್ಲಿ ಸುಮಾರು 200 ಮೀಟರ್‍ವರೆಗೆ, ಕಾವೂರು ಅನಂತ ಆರ್ಕೆಡ್ ಕಾಂಪ್ಲೆಕ್ಸ್ ನ ಎದುರು ರಸ್ತೆಯಿಂದ ಕಾವೂರು ಕೆ.ಪಿ.ಟಿ.ಸಿ.ಎಲ್. ಗೇಟ್‍ವರೆಗೆ ರಸ್ತೆಯ ಎಡ ಬದಿಯಲ್ಲಿ ಸುಮಾರು 170 ಮೀಟರ್ ವರೆಗೆ
- ಕಾವೂರು ಜಂಕ್ಷನ್ ನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಬಸ್ ನಿಲ್ದಾಣದಿಂದ ಮುಂದಕ್ಕೆ ಕೋರ್ದಬ್ಬು ದೈವಸ್ಥಾನದ ಮುಖ್ಯ ದ್ವಾರದವರೆಗೆ ರಸ್ತೆಯ ಎಡ ಬದಿಯಲ್ಲಿ ಸುಮಾರು 80 ಮೀಟರ್‍ವರೆಗೆ ವಾಹನ ನಿಲುಗಡೆ ನಿಷೇಧಿಸಿದೆ .
ಸಂಚಾರ ದಕ್ಷಿಣ ಠಾಣೆ:
- ಪದವಿನಂಗಡಿ ಜಂಕ್ಷನ್‍ನ ವಿಶ್ವಗೀತಾ ಕಾಂಪ್ಲೆಕ್ಸ್ ನಿಂದ ಸುಮಾರು 70 ಮೀಟರ್ ವರೆಗೆ ರಸ್ತೆಯ ಎಡ ಬದಿಯಲ್ಲಿ, ಪಂಪ್ವೆಲ್ ಜಂಕ್ಷನ್ ನಿಂದ ಬಿ.ಸಿ. ರೋಡ್ ಕಡೆಗೆ ಸಾಗುವ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 200 ಮೀಟರ್‍ವರೆಗೆ,
- ಕಲ್ಲಾಪು ಜಂಕ್ಷನ್ ನಿಂದ ಯುನಿಟಿ ಹಾಲ್ ಕ್ರಾಸ್ ರಸ್ತೆಯವರೆಗೆ ಎಡ ಬದಿಯಲ್ಲಿ ಸುಮಾರು 200 ಮೀಟರ್‍ವರೆಗೆ,
- ದೇರಳಕಟ್ಟೆ ಯೆನಪೆÇೀಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಕಂಪೌಂಡ್‍ಗೆ ತಾಗಿ ಬಗಂಬಿಲ ಕಡೆ ಹೋಗುವ ರಸ್ತೆಯ ಎಡ ಬದಿಯಲ್ಲಿ ಸುಮಾರು 100 ಮೀಟರ್‍ವರೆಗೆ,
- ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಗೇಟ್ ನಿಂದ ಶಾಂತಿ ಧಾಮ ಕಾನ್ವೆಂಟ್ ಗೆ ಹೋಗುವ ಕ್ರಾಸ್ ರಸ್ತೆಯವರೆಗೆ ಎರಡೂ ಬದಿಯಲ್ಲಿ 200 ಮೀಟರ್‍ವರೆಗೆ ವಾಹನ ನಿಲುಗಡೆ ನಿಷೇಧಿಸಿದೆ .
ಈ ನಿರ್ಬಂಧಗಳು ಪೊಲೀಸ್ , ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.