ಬೀದಿ ನಾಯಿಗಳ ಸಂತಾನ ಶಸ್ತ್ರ ಚಿಕಿತ್ಸೆ: ಮಾಹಿತಿ ನೀಡಲು ಸೂಚನೆ
ಕಾರವಾರ ಡಿ. 18, 2020: ಬೀದಿ ನಾಯಿಗಳ ಸಂತಾನ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದಡಿ ಕಾರವಾರ ನಗರ ಸಭೆಯ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಅಕ್ಟೋಬರ್ 5 ರಿಂದ ಈವರೆಗೆ ಸುಮಾರು 1,500 ನಾಯಿಗಳಿಗೆ (ಗಂಡು ಮತ್ತು ಹೆಣ್ಣು) ಸಂತಾನ ಶಸ್ತ್ರ ಚಿಕಿತ್ಸೆ ಮಾಡಿದ್ದು, ನಿಯಮಾನುಸಾರ ಗುರುತಿಗಾಗಿ ನಾಯಿಯ ಒಂದು ಕಿವಿ ಕತ್ತರಿಸಿಲಾಗಿರುತ್ತದೆ.
ಪ್ರಸ್ತುತ ಸಂತಾನ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಪ್ರಗತಿಯಲ್ಲಿದ್ದು, ಸಾರ್ವಜನಿಕರು ತಮ್ಮ ವಾರ್ಡಿನಲ್ಲಿ ಚಿಕಿತ್ಸೆಗೆ ಒಳಪಡದ ಹಾಗೂ ಕಿವಿ ಕತ್ತರಿಸಿದ ಗುರುತು ಇಲ್ಲದಿರುವ ನಾಯಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಲಿಖಿತ ರೂಪದಲ್ಲಿ ಅಥವಾ ದೂರವಾಣಿ ಸಂಖ್ಯೆ 08382226320 ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರಾದ ಆರ್.ಪಿ. ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.