ಕುಮಟಾ: ಡಿಸೆಂಬರ್ 18ಕ್ಕೆ ಬೃಹತ್ ಲೋಕ ಅದಾಲತ್

 ಕುಮಟಾ: ಡಿಸೆಂಬರ್ 18ಕ್ಕೆ ಬೃಹತ್ ಲೋಕ ಅದಾಲತ್
Share this post

ಕಾರವಾರ ಡಿ.14, 2021: ಕುಮಟಾ ನ್ಯಾಯಾಲಯದಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವ ಉದ್ದೇಶದಿಂದ ಡಿಸೆಂಬರ್ 18 ರಂದು ಬೃಹತ್ ಲೋಕ ಅದಾಲತ್ ನಡೆಯಲಿದೆ.

ಸದರಿ ಲೋಕ ಅದಾಲತ್‍ನಲ್ಲಿ ದೌರ್ಜನ್ಯ, ನಷ್ಟ ಪರಿಹಾರ ಕುರಿತ ತಕರಾರುಗಳು, ಮೋಟಾರ್ ವೆಹಿಕಲ್ ಪ್ರಕರಣಗಳು, ಬ್ಯಾಂಕುಗಳ ಸಾಲ ವಸೂಲಿ, ಸಿವಿಲ್ ವ್ಯಾಜ್ಯಗಳು, ಚೆಕ್ ಬೌನ್ಸ್ ಪ್ರಕರಣಗಳು ಸೇರಿ ಹಲವು ಬಗೆಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ.

ಕಕ್ಷಿದಾರರಿಗೆ ಖರ್ಚಿಲ್ಲದೆ ತ್ವರಿತವಾಗಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯಕ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ನರೇಂದ್ರ ಬಿ. ಆರ್ ಅವರನ್ನು ಒಳಗೊಂಡಂತೆ ಕುಮಟಾ ತಾಲೂಕು ಕಾನೂನು ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Subscribe to our newsletter!

Other related posts

error: Content is protected !!