ಉಡುಪಿ: ನ್ಯುಮೊಕೋಕಲ್ ಲಸಿಕೆಗೆ ಚಾಲನೆ

 ಉಡುಪಿ: ನ್ಯುಮೊಕೋಕಲ್ ಲಸಿಕೆಗೆ ಚಾಲನೆ
Share this post

ಉಡುಪಿ, ನ 02, 2021: ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಇದರಲ್ಲಿ ಒಂದೂವರೆ ತಿಂಗಳ ಶಿಶುಗಳಿಗೆ ಪೆಂಟಾ1, ಐ.ಪಿ.ವಿ 1, ಒ.ಪಿ.ವಿ1, ರೋಟಾ 1 ರ ಜೊತೆಗೆ ನ್ಯುಮೊಕೋಕಲ್ ಲಸಿಕೆಯ ಚಾಲನಾ ಕಾರ್ಯಕ್ರಮವನ್ನು ನವೆಂಬರ್ 4 ರಂದು ಬೆಳಗ್ಗೆ 10 ಗಂಟೆಗೆ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಲಸಿಕಾ ಕಾರ್ಯಪಡೆಯ ಅಧ್ಯಕ್ಷರು ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!