ಸ್ವಸಹಾಯ ಕಿರು ಉದ್ದಿಮೆ ಯೋಜನೆಯ ನೇರವು

 ಸ್ವಸಹಾಯ ಕಿರು ಉದ್ದಿಮೆ ಯೋಜನೆಯ ನೇರವು
Share this post

ಉಡುಪಿ, ಸೆ 26, 2021: ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ವ-ಸಹಾಯ ಗುಂಪುಗಳನ್ನು ಕಿರು ಉದ್ದಿಮೆ
ಸಂಸ್ಥೆಗಳನ್ನಾಗಿ ರೂಪಿಸಲು ತಲಾ 1 ಲಕ್ಷ ರೂ. ನಂತೆ ಬೀಜಧನ ಒದಗಿಸಲಾಗುತ್ತಿದೆ.

ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸ್ವಸಹಾಯ ಗುಂಪುಗಳು 10 ವರ್ಷಗಳಿಂದ ಆದಾಯೋತ್ಪನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಹಾಗೂ ಎನ್.ಆರ್.ಎಲ್.ಎಮ್ ಅಡಿಯಲ್ಲಿ ಬರುವಂತಹ ಗ್ರಾಮ ಪಂಚಾಯತ್ ಮಟ್ಟದ ಫೆಡರೇಶನ್‌ನಲ್ಲಿ ಕಡ್ದಾಯವಾಗಿ ಸದಸ್ಯರಾಗಿರಬೇಕು ಮತ್ತು ಸಮುದಾಯ ಬಂಡವಾಳ
ನಿಧಿ ಪಡೆದುಕೊಳ್ಳವುದರ ಜೊತೆಗೆ ಕಳೆದ 5 ವರ್ಷಗಳಿಂದ ಬ್ಯಾಂಕ್‌ಗಳಿಂದ ಸಾಲ ಪಡೆದಿರಬೇಕು. ಸುಸ್ಥಿರದಾರರಾಗಿರದೇ
ಮರುಪಾವತಿಸಿರಬೇಕು.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಶಿಶು ಅಭಿವೃದ್ದಿ ಯೋಜನಾ ಕಛೇರಿ ದೂರವಾಣಿ ಸಂಖ್ಯೆ: (ಉಡುಪಿ-0820-2524055), (ಕುಂದಾಪುರ-08254-230807), (ಕಾರ್ಕಳ-08258-230992), (ಬ್ರಹ್ಮಾವರ-0820-2562244) ನ್ನು ಸಂಪರ್ಕಿಸುವAತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!