ಆರೋಗ್ಯ ಕಾರ್ಯಕರ್ತರ ಭೇಟಿ ವೇಳೆ ಮಾಹಿತಿ ನೀಡಲು ಕೋರಿಕೆ
ಮಂಗಳೂರು ಆ.18, 2021: ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಕೋವಿಡ್- 19 ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಹಾಗೂ ಅವರ ಮನೆಯಲ್ಲಿರುವ ಸಂಪರ್ಕಿತರ ಸಮೀಕ್ಷೆಯ ಚಟುವಟಿಕೆಯನ್ನು ಇದೇ ಆಗಸ್ಟ್ 16 ರಿಂದ 31 ರವರೆಗೆ ಜಿಲ್ಲೆಯ ಎಲ್ಲಾ ಕ್ಷಯ ಚಿಕಿತ್ಸಾ ಘಟಕಗಳ ಸಂಬಂಧಪಟ್ಟ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಕೋವಿಡ್- 19 ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಹಾಗೂ ಆವರ ಮನೆಯಲ್ಲಿರುವ ಸಂಪರ್ಕಿತರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಸಿಬ್ಬಂದಿ ವೈಯುಕ್ತಿಕವಾಗಿ ಭೇಟಿ ಮಾಡಿ, ಮೌಖಿಕವಾಗಿ ಕ್ಷಯ ರೋಗದ ಲಕ್ಷಣದ ಬಗ್ಗೆ ತಪಾಸಣೆಗೆ ಮಾಡಬೇಕು. (ಕ್ಷಯರೋಗದ ಲಕ್ಷಣಗಳಾದ 2 ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಗಮನಾರ್ಹವಾಗಿ ತೂಕ ನಷ್ಟ, ರಾತ್ರಿ ಬೆವರುವಿಕೆ ಇತ್ಯಾದಿ), ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಸಿಬ್ಬಂದಿಗಳು ಕೋವಿಡ್-19 ಸೋಂಕಿನ ಮುಂಜಾಗ್ರತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ.
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಕೋವಿಡ್-19 ನಇಂದ ಚೇತರಿಸಿಕೊಂಡ ವ್ಯಕ್ತಿಗಳ ಮತ್ತು ಅವರ ಮನೆಯಲ್ಲಿರುವ ಸಂಪರ್ಕಿತರ ಸಮೀಕ್ಷೆಯ ಚಟುವಟಿಕೆಯನ್ನು ಆ.16 ರಿಂದ 31ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷಯ ಚಿಕಿತ್ಸಾ ಘಟಕಗಳ ಸಂಬಂಧಿಸಿದ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಮಾಹಿತಿ ಕೇಳಿದ ಸಂದರ್ಭದಲ್ಲಿ ಕೋವಿಡ್-19 ರಿಂದ ಚೇತರಿಸಿಕೊಂಡ ವ್ಯಕ್ತಿಗಳು ಹಾಗೂ ಅವರ ಮನೆಯಲ್ಲಿರುವ ಸಂಪರ್ಕಿತರು ಮಾಹಿತಿ ನೀಡಿ ಮತ್ತು ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಕಾರ್ಯಕರ್ತರ ಸೂಚನೆಯಂತೆ ಕಫ ಪರೀಕ್ಷೆಯನ್ನು ಮಾಡುವಂತೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.