ಉತ್ತರ ಕನ್ನಡ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣ

 ಉತ್ತರ ಕನ್ನಡ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣ
Share this post

ಕಾರವಾರ, ಜುಲೈ 31, 2021: ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 2 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 1 ನೇ ಡೋಸ್ ಲಸಿಕಾಕರಣ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಹಂತ ಹಂತವಾಗಿ 15840 ಆರೋಗ್ಯ ಕಾರ್ಯಕರ್ತರು, 8484 ಮಂಚೂಣಿ ಕಾರ್ಯಕರ್ತರು, 116627 ಜನ 60 ವರ್ಷ ಮೇಲ್ಪಟ್ಟ ನಾಗರೀಕರು, 154618 ಜನ 45 ರಿಂದ 60 ವರ್ಷ ವಯೋಮಾನದ ನಾಗರೀಕರು, 159064 ಜನ ರಾಜ್ಯ ಸರ್ಕಾರ ಗುರುತಿಸಿದ ಮಂಚೂಣಿ ಕಾರ್ಯಕರ್ತರು, ಹಾಗೂ ಆಧ್ಯತಾ ಗುಂಪಿನವರಿಗೆ ಹೀಗೆ ಒಟ್ಟೂ 454633 ಫಲಾನುಭವಿಗಳಿಗೆ ಈಗಾಗಲೇ ಕೋವಿಡ್ ಲಸಿಕಾಕರಣ ಮಾಡಲಾಗಿದೆ. ಇವರುಗಳ ಪೈಕಿ 156737 ಫಲಾನುಭವಿಗಳಿಗೆ 2 ನೇ ಡೋಸ್ ಕೂಡ ನೀಡಲಾಗಿರುತ್ತದೆ. ಇನ್ನುಳಿದ 297896 ಫಲಾನುಭವಿಗಳಿಗೆ 2ನೇ ಡೋಸ್ ನೀಡಬೇಕಾಗಿದೆ.

ಜಿಲ್ಲೆಗೆ ಪೂರೈಕೆಯಾಗುವ ಕೋವಿಡ್ ಲಸಿಕೆಯಲ್ಲಿ 50 % 2ನೇ ಡೋಸ್ ಗೆ ಮೀಸಲಿಟ್ಟು ಲಸಿಕೆ ಲಭ್ಯತೆಯ ಆಧಾರದ ಮೆಲೆ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 1 ನೇ ಡೋಸ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.

ಲಭ್ಯವಿರುವ ಲಸಿಕೆಯ ಪ್ರಮಾಣವನ್ನು ಲಸಿಕಾಕರಣ ನಡೆಸುವ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು. ಆದುದರಿಂದ ಸಾರ್ವಜನಿಕರು ಕೋವಿಡ್ಗೆ ಸಂಬಂಧಿಸಿದ ಮುಂಜ್ರಾಗತಾ ಕ್ರಮಗಳನ್ನು ಪಾಲಿಸಿ ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಪಡೆಯಲು ಕೋರಲಾಗಿದೆ.

Subscribe to our newsletter!

Other related posts

error: Content is protected !!