ಕೊಚ್ಚಿ ತಿರುಮಲ ದೇವಳದಲ್ಲಿ ಶ್ರೀಮದ್ ಸಂಯಮಿಂದ್ರ ತೀರ್ಥ ಶ್ರೀಪಾದರ ಚಾತುರ್ಮಾಸ
ಮನುಷ್ಯ ಜೀವನದಲ್ಲಿ ಸತ್ ಕರ್ಮ ಮಾಡುತ್ತಿರುವುದರ ಉದ್ದೇಶ ಯಜ್ಞ-ತಪಸ್ಸು- ದಾನ ಸತ್ ಕರ್ಮಗಳು. ಯಜ್ಞಗಳು ಹಲವು ವಿಧ-ದಯಾ-ಕ್ರಮ- ಜ್ಞಾನ-ಯೋಗ-ಸ್ವಧ್ಯಾಯ ಇತ್ಯಾದಿ. ತಮ್ಮ ಯೋಗ್ಯತಾನುಸಾರ ಉತ್ತಮ-ಸಾತ್ವಿಕ ಕರ್ಮ-ಚಿಂತನೆ-ಜೀವನ ಮಾನವನ ಸಹಜ ಶೈಲಿ.
ವರ್ಷದ ೧೨ ತಿಂಗಳುಗಳಲ್ಲಿ ೪ ತಿಂಗಳ ವೃತವೇ ಜಾತುರ್ಮಾಸ ವೃತ. ದೈವಿಕ-ದೈಹಿಕ-ಭೌತಿಕ-ಆಧ್ಯಾತ್ಮೀಕವಾಗಿ ಯಾವುದೇ ರೀತಿಯಲ್ಲಿ ಚಿಂತನೆ ಮಾಡಿದರೂ-ಮಾಡದಿದ್ದರೂ ಅದರ ಗುಣ ಅದಕ್ಕೆ ಇದ್ದೇ ಇದೆ. ನಾವು ಹೇಳುವುದಕ್ಕಿಂತ ನಡತೆಯಲ್ಲಿ ಮಾಡಿ ತೋರಿಸುವ ಭಾರತೀಯ ವೇದ ಧರ್ಮದವರು- ಭಾರತೀಯರು. ಇಲ್ಲಿ ಧರ್ಮಕ್ಕೆ ನಾಶವಿಲ್ಲ. ಸನಾತನ ಧರ್ಮ-ಸರ್ವರ ಸುಖ ಬಯಸುತ್ತದೆ.
ಆಷಾಢ ಏಕಾದಶೀ ಶಯನೀ ಏಕಾದಶೀ ಪರಮಾತ್ಮನು ನಿದ್ರಿಸುವನು. ನಿದ್ರೆಯಲ್ಲಿ ಹಲವು ವಿಧ. ನಾವು ತಿಳಿದಂತೆ ಈ ನಿದ್ರೆ ಅಲ್ಲ. ಪರಮಾತ್ಮನ ನಿದ್ರಾ ಸಮಯ ದಕ್ಷಿಣಾಯನ ಇತ್ಯಾದಿ. ಮಳೆಗಾಲ ಇಂದೂ ಕಷ್ಟಕರ ಕಾಲ. ವ್ಯವಹಾರದವರಿಗೂ ಕಡಿಮೆ ಕೆಲಸದ ಕಾಲ. ಶಾಕವೃತ-ಕ್ಷೀರವೃತ-ದಧಿವೃತ-ದ್ವಿದಳ ವೃತವೆಂದು ವೃತ ಸ್ವೀಕಾರದ ನಂತರ ದೇವರ ವಿಶೇಷ ಪೂಜ-ಜಪಾದಿಗಳ ಸಹಿತ ಸತ್ ಚಿಂತನೆಯೊ೦ದಿಗೆ ಕಾಲ ಕಳೆಯುವುದು ಇದೇ ಸಮಯದಲ್ಲಿ.
ನಾಗ ಪಂಚಮಿ, ಗಣೇಶ ಚತುರ್ಥಿ, ಅನಂತ ಚತುರ್ದಶಿ, ನವರಾತ್ರಿ ಇತ್ಯಾದಿ ವೃತಗಳು ಯಾಂತ್ರಿಕವಾಗದೇ ಇವುಗಳನ್ನು ತಿಳಿದು ಶ್ರದ್ಧೆಯಿಂದ ಆಚರಿಸುವುದು ಅಗತ್ಯ. ಸಕಾಲಿನ ಪತ್ರ-ಪುಷ್ಪ-ಕಂದ- ಮೂಲ-ಆಹಾರ ಶ್ರದ್ಧೆಯಿಂದ ಸರ್ವರೂ ಆಚರಿಸುತಿದ್ದ ಈ ಚಾತುರ್ಮಾಸ ವೃತ ಈಗ ಯತಿಗಳು ಅಂದರೆ ಸನ್ಯಾಸಿಗಳು ತಮ್ಮ ತಮ್ಮ ಸಂಪ್ರದಾಯದ೦ತೆ ನಾಲ್ಕು ತಿಂಗಳು ನಾಲ್ಕು ಪಕ್ಷ,ನಾಲ್ಕು ವಾರ ಹೀಗೆಲ್ಲ ಆಚರಿಸುವುದು ಕಂಡು ಬರುತ್ತಿದೆ.
ಶ್ರೀಮಾದ್ ವಿಜಯೇಂದ್ರ ತೀರ್ಥರು ಅನುಗ್ರಹಿಸಿದ ಧರ್ಮಪೀಠ ಶ್ರೀ ಕಾಶೀಮಠ ಸಂಸ್ಥಾನ. ಪ್ರಥಮ ಮಠ ವಾರಣಾಸಿಯ ಬ್ರಹ್ಮಘಾಟ್ ನಲ್ಲಿ ಇದ್ದು ಇಂದು ಸಮಸ್ತ ಭಾಗದಲ್ಲಿ ಶಾಖಾಮಠಗಳೂ ಇದೆ.. ಪ್ರಸ್ತುತ ಪೀಠಾಧಿಪತಿಗಳಾದ ಶೀಮದ್ ಸಂಯಮೀ೦ದ್ರ ತೀರ್ಥ ಶ್ರೀಗಳು ಪ್ಲವ ನಾಮ ಸಂವಸ್ಸರದ ಚಾತುರ್ಮಾಸ ವ್ರತ ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ದೇವಾಲಗಳಲೊಂದಾದ ಕೇರಳ ರಾಜ್ಯದ ಕೊಚ್ಚಿ ತಿರುಮಲ ದೇವಳದಲ್ಲಿ ಸ್ಥಾನಾರಾಧ್ಯ ಶ್ರೀವ್ಯಾಸರಘುಪತಿ ನರಸಿಂಹರಾದಿ ಪರಿವಾರ ದೇವತೆಗಳೊಂದಿಗೆ ವೈಭವಪೂರ್ಣ ಪೂಜ-ಪುರಸ್ಕಾರ ನಿತ್ಯಭಜನೆ ಸ್ತುತ್ರಪಾಠ-ವೇದಾದಿ ಪಾರಾಯಣಗಳೊಂದಿಗೆ ಸಾಗುತ್ತಿದೆ.
೨೦೦೨ ರಲ್ಲಿ ಗಂಗಾತೀರದ ಗಂಗಾದ್ವಾರ(ಹರಿದ್ವಾರ)ದಲ್ಲಿ ದೀಕ್ಷೆ ಸ್ವೀಕರಿಸಿದ ಸಂಯಮೀ೦ದ್ರ ತೀರ್ಥರು ದೀರ್ಘಕಾಲ ಅಧ್ಯಯನ, ಗುರು ಶ್ರೀಮದ್ ಸುಧೀಂದ್ರ ತೀರ್ಥರ ಸಹವಾಸದಿಂದ ಅನುಭವ ಪಡೆದು ಸಕಲ ಜವಬ್ದಾರಿಯನ್ನು ಶ್ರೀ ಹರಿಗುರು ಪೂಜಾ ರೂಪದಲ್ಲಿ ನಡೆಸುತ್ತಿದ್ದಾರೆ. ಸಮಾಜದಲ್ಲಿ ಯುವ ವರ್ಗದವರು ಸಂಪನ್ನಾರಾಗುವ ಅಗತ್ಯವಿದೆ.ಕ್ಷಣಿಕ ಸುಖಾದಿಗಳಲ್ಲಿ ತಮ್ಮನ್ನು ತಿಳಿಯದೇ ಮುನ್ನಡೆಯುತ್ತಿರುವ ಯುವಜನಾಂಗ ಧರ್ಮಾಸಕ್ತರಾಗಬೇಕು. ಶ್ರೀ ಹರಿಗುರು ಸೇವಾರೂಪದ ಚಾತುರ್ಮಾಸ.
ಚಿತ್ರ -ಲೇಖನ : ಮಂಜು ನೀರೇಶ್ವಾಲ್ಯ