ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನ ನೀಡಿಕೆ

 ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯಧನ ನೀಡಿಕೆ
Share this post


ಮಂಗಳೂರು, ಜು.14, 2021: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಯೋಜನೆಗಳಡಿ ಸಹಾಯಧನ ನೀಡಲಾಗುತ್ತಿದೆ.

ಬಾಳೆ, ರಾಂಬೂಟನ್, ತರಕಾರಿ, ಮಲ್ಲಿಗೆ, ಕಾಳುಮೆಣಸು, ಗೇರು ಮತ್ತು ಕೋಕೋ ಬೆಳೆಗಳ ಪ್ರದೇಶ ವಿಸ್ತರಣೆ, ಗೇರು ಮತ್ತು ಕಾಳುಮೆಣಸು ಬೆಳೆಗಳ ಪುನಃಶ್ಚೇತನ, ಪ್ಲಾಸ್ಟಿಕ್ ಮಲ್ಚಿಂಗ್, ಕೃಷಿ ಹೊಂಡ ನಿರ್ಮಾಣ, ಸಮಗ್ರ ಕೀಟ-ರೋಗ ನಿಯಂತ್ರಣ, ಸಣ್ಣ ನರ್ಸರಿ, ಆಣಬೆ ಘಟಕ, ಪ್ಯಾಕ್ ಹೌಸ್, ಸೋಲಾರ್ ಪಾಲಿಟನಲ್ ಡ್ರೈಯರ್, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು, ಆಸಕ್ತರು ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. 

ಹೆಚ್ಚಿನ ಮಾಹಿತಿಗೆ ಸಮೀಪದ ತೋಟಗಾರಿಕೆ ಇಲಾಖೆಗಳನ್ನು ಭೇಟಿ ಮಾಡಬಹುದು ಅಥವಾ ಈ ಕೆಳಗಿನ ಸಂಖ್ಯೆಗಳನ್ನು ಸಂರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿದೇರ್ಶಕರ ಪ್ರಕಟಣೆ ತಿಳಿಸಿದೆ.  

  • ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ತೋಟಗಾರಿಕೆ ಉಪ ನಿರ್ದೇಶಕರ ಮೊ. ಸಂಖ್ಯೆ: 9448999226
  • ಮಂಗಳೂರು ಜಿಲ್ಲಾ ಪಂಚಾಯತ್‍ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊಬೈಲ್ ಹಾಗೂ ದೂರವಾಣಿ ಸಂ: 8277806378, 0824-2423615
  • ಬಂಟ್ವಾಳದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊಬೈಲ್ ಹಾಗೂ ದೂರವಾಣಿ 8277806371, 08255-234102
  • ಪುತ್ತೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊಬೈಲ್ ಹಾಗೂ ದೂರವಾಣಿ ಸಂ: 9731854527, 08251-230905
  • ಸುಳ್ಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊಬೈಲ್ ಹಾಗೂ ದೂರವಾಣಿ ಸಂ: 9880993238, 08257-232020
  • ಬೆಳ್ತಂಗಡಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊಬೈಲ್ ಹಾಗೂ ದೂರವಾಣಿ ಸಂ: 9448336863, 08256-232148

Subscribe to our newsletter!

Other related posts

error: Content is protected !!