ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ

 ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ
Share this post

ಉಜಿರೆ, ಜೂನ್ 23, 2021: ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ ಹೆಗ್ಗಡೆ ಯವರ ಮಾರ್ಗದರ್ಶನದಂತೆ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ಈ ಲಸಿಕಾ ಕಾರ್ಯಕ್ರಮ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬೆಳಿಗ್ಗೆ 11ರಿಂದ ಸಂಜೆ 4.00 ರವರೆಗೆ ಜೂನ್ 27ರವರೆಗೆ ನಡೆಯಲಿದೆ.

ಮೊದಲ ದಿನ- ಜೂನ್ 22 ರಂದು 100 ಕೋವಿಶೀಲ್ಡ್ ಹಾಗೂ 40 ಕೋವ್ಯಾಕ್ಷಿನ್ ಲಸಿಕೆ ನೀಡಲಾಗಿತ್ತು. ಇಂದು 167 ಕೋವಿಶೀಲ್ಡ್ ಹಾಗೂ 39 ಕೋವ್ಯಾಕ್ಷಿನ್ ಲಸಿಕೆ ನೀಡಲಾಯಿತು.

ಕೋವ್ಯಾಕ್ಷಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳು ಲಭ್ಯವಿದ್ದು, ಕೋವ್ಯಾಕ್ಷಿನ್ 1200 ರೂಪಾಯಿ ಮತ್ತು ಕೋವಿಶೀಲ್ಡ್ 780 ರೂಪಾಯಿ ದರಗಳಲ್ಲಿ ಲಸಿಕೆಗಳು ದೊರೆಯಲಿವೆ.

ಆಸಕ್ತರು ತಮ್ಮ ಹೆಸರು, ಆಧಾರ್ ನಂಬರ್, ಬಯಸುವ ಲಸಿಕೆ ಹೆಸರು ಮತ್ತು ಎಷ್ಟನೇ ಡೋಸ್ ಎಂದು ನಮೂದಿಸಿ 9071145369 ಈ ಮೊಬೈಲ್ ನಂಬರಿಗೆ ಎಸ್.ಎಂ.ಎಸ್ ಕಳುಹಿಸಬೇಕು. ಲಸಿಕೆ ನೀಡುವ ದಿನಾಂಕವನ್ನು ತಿಳಿಸಲಾಗುತ್ತದೆ.

ಆಧಾರ್ ಕಾರ್ಡಿನೊಂದಿಗೆ ನಿಗದಿಪಡಿಸಿದ ದಿನದಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಬಹುದು ಎಂದು ಆಸ್ಪತ್ರೆಯ ನಿರ್ದೇಶಕರು ತಿಳಿಸಿದರು.

Subscribe to our newsletter!

Other related posts

error: Content is protected !!