ಉಡುಪಿ: ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆ

 ಉಡುಪಿ: ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆ
Share this post

ಉಡುಪಿ, ಜೂನ್ 03, 2021: 18 ರಿಂದ 44 ವರ್ಷದ ಆಯ್ದ ಗುಂಪುಗಳಿಗೆ ಕೋವಿಡ್-19 ಲಸಿಕಾಕರಣ ಪ್ರಾರಂಭವಾಗಿದ್ದು, ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಲಸಿಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆಯಲ್ಲಿಇದರ ನೋಡೆಲ್‌ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಅವರನ್ನು ನೇಮಿಸಲಾಗಿದ್ದು, ಲಸಿಕೆ ನೀಡುವ ಕುರಿತ ಅನೆಕ್ಸರ್-3 ನ್ನುಅಪರ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಕಚೇರಿ, ಮಣಿಪಾಲ, ಉಡುಪಿ ಇಲ್ಲಿಂದ ಪಡೆಯಬಹುದಾಗಿದೆ.  

ಅನೆಕ್ಸರ್-3 ಪಡೆಯಲು ಅರ್ಜಿಯೊಂದಿಗೆ, ಆಧಾರ್‌ ಕಾರ್ಡ್, ಪಾಸ್ ಪೋರ್ಟ್ , ವೀಸಾ , ವ್ಯಾಸಂಗದ ಬಗ್ಗೆ ವಿದ್ಯಾಸಂಸ್ಥೆಯ ಪತ್ರ (Offer letter) ಇವುಗಳ ಮೂಲಪ್ರತಿ ಹಾಗೂ ಸ್ವಯಂ ದೃಢೀಕರಿಸಿದ ಪ್ರತಿಯೊಂದಿಗೆ ಕಚೇರಿಯನ್ನು ಸಂಪರ್ಕಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂ: 0820-2574802 ಅಥವಾ 1077 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Subscribe to our newsletter!

Other related posts

error: Content is protected !!