ರಘುಪತಿ ಭಟ್ ಮನವಿ ಮೇರೆಗೆ ರೋಬೋಸಾಫ್ಟ್ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್, 1000 ಪಲ್ಸ್ ಆಕ್ಸಿ ಮೀಟರ್ ಕೊಡುಗೆ

 ರಘುಪತಿ ಭಟ್ ಮನವಿ ಮೇರೆಗೆ  ರೋಬೋಸಾಫ್ಟ್ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್,  1000 ಪಲ್ಸ್ ಆಕ್ಸಿ ಮೀಟರ್ ಕೊಡುಗೆ
Share this post

ಉಡುಪಿ, ಮೇ 28, 2021: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಕೊರತೆಯಾಗದಂತೆ ಹಾಗೂ ಇನ್ನಿತರ ಸಹಕಾರಕ್ಕಾಗಿ ಶಾಸಕ ಕೆ. ರಘುಪತಿ ಭಟ್ ಅವರು ದಾನಿಗಳಲ್ಲಿ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಉಡುಪಿಯ ರೋಬೋಸಾಫ್ಟ್ ಸಂಸ್ಥೆ ರೂ. 20.00 ಲಕ್ಷ ವೆಚ್ಚದಲ್ಲಿ 10 ಲೀಟರ್ ಸಾಮರ್ಥ್ಯದ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಪಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿದ್ದಾರೆ.

ಇಂದು ರಘುಪತಿ ಭಟ್ ಅವರ ಸಮ್ಮುಖದಲ್ಲಿ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಪಲ್ಸ್ ಆಕ್ಸಿ ಮೀಟರ್ ರನ್ನು ಜಿಲ್ಲಾಧಿಕಾರಿಯವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ರೂ. 20.00 ಲಕ್ಷ ವೆಚ್ಚದಲ್ಲಿ ಇದನ್ನು ಕೊಡುಗೆಯಾಗಿ ನೀಡಿದ ರೋಬೋಸಾಫ್ಟ್ ಸಂಸ್ಥೆಗೆ ಹಾಗೂ ಅವರ ಸಾಮಾಜಿಕ ಕಳಕಳಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ರೋಹಿತ್ ಭಟ್, ಆರ್ಥಿಕ ನಿರ್ದೇಶಕರಾದ ಸುಧೀರ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್ ಹಾಗೂ ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!