ಮಣಿಪಾಲ: ಕೋವಿಡ್ ಕೇರ್ ಸೆಂಟರ್ ಗೆ ರಘುಪತಿ ಭಟ್ ಭೇಟಿ

 ಮಣಿಪಾಲ: ಕೋವಿಡ್ ಕೇರ್ ಸೆಂಟರ್ ಗೆ   ರಘುಪತಿ ಭಟ್ ಭೇಟಿ
Share this post

ಉಡುಪಿ, ಮೇ 20, 2021: ಕೋವಿಡ್ ಸೋಂಕು ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿ ಐಸೋಲೇಷನ್ ಆಗಲು ಸಮಸ್ಯೆ ಇರುವವರಿಗೆ ಮಣಿಪಾಲದ ಎಂಐಟಿ ಹಾಸ್ಟೆಲ್ ನಲ್ಲಿ 300 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.

ಈ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶಾಸಕ ಶ್ರೀ ಕೆ ರಘುಪತಿ ಭಟ್ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಐಸೋಲೇಷನ್ ಆದವರಿಗೆ ಪ್ರತಿದಿನ ಅವರ ಆರೋಗ್ಯದ ಬಗ್ಗೆ ನಿಗಾವಹಿಸಲು 24 ಗಂಟೆಯೂ ಉತ್ತಮವಾದ ವೈದ್ಯಕೀಯ ಸೌಲಭ್ಯ, ಊಟೋಪಚಾರದ ವ್ಯವಸ್ಥೆ ಇರುತ್ತದೆ. ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿ ಎಲ್ಲವೂ ಉಚಿತವಾಗಿರುತ್ತದೆ.

ಆದ್ದರಿಂದ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಐಸೋಲೇಷನ್ ಬಗ್ಗೆ ಕಾಲ್ ಸೆಂಟರ್ (7204789104) ಗೆ ಫೋನ್ ಮಾಡಿ ಸೊಂಕು ದೃಢಪಟ್ಟು ಮನೆಯಲ್ಲಿ ಸಮಸ್ಯೆ ಇದ್ದವರು ಇಲ್ಲಿ ದಾಖಲಾಗಬಹುದು ಎಂದು ಶಾಸಕ ಶ್ರೀ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ದಾಖಲಾದ ಸೋಂಕಿತರು ಕೋವಿಡ್ ಕೇರ್ ಸೆಂಟರ್ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ವೈದ್ಯರಾದ ಡಾll ವಾಸುದೇವ್ ಮತ್ತು ಡಾll ಶ್ರೀಧರ್ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಆಯುಕ್ತರಾದ ಉದಯಕುಮಾರ್ ಶೆಟ್ಟಿ, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!