ಕೋವಿಡ್-19 ಹಿನ್ನೆಲೆ: ಅಂಚೆ ಕಚೇರಿ ಕೆಲಸದ ಸಮಯ ಬದಲು

 ಕೋವಿಡ್-19 ಹಿನ್ನೆಲೆ: ಅಂಚೆ ಕಚೇರಿ ಕೆಲಸದ ಸಮಯ ಬದಲು
Share this post

ಕಾರವಾರ ಏಪ್ರಿಲ್ 29, 2021: ಕೋವಿಡ್-19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಕಾರವಾರ ವಿಭಾಗದ ಪ್ರಧಾನ ಅಂಚೆ ಸೇರಿದಂತೆ, ಇದರಡಿಯಲ್ಲಿ ಬರುವ ಎಲ್ಲಾ ಉಪ ಅಂಚೆ ಕಚೇರಿಗಳು ಮೇ 12 ರವರೆಗೆ ಬೆಳಗಿನ 8 ಗಂಟೆಯಿಂದ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ ಎಂದು ಕಾರವಾರ ವಿಭಾಗ ಪ್ರಧಾನ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಧೀಕ್ಷಕರ ಕಚೇರಿಗಳು ಬೆಳಿಗ್ಗೆ 9 ರಿಂದ 2 ರವರೆಗೆ ತೆರೆದಿರುತ್ತವೆ. ಜೊತೆಗೆ ಕಾರವಾರ ಪ್ರಧಾನ ಮತ್ತು ಉಪ ಅಂಚೆ ಕಚೇರಿ ಸೇರಿದಂತೆ ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿನ ಉಪ ಅಂಚೆ ಕಚೇರಿಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಸಾರ್ವಜನಿಕ ವ್ಯವಹಾರಕ್ಕೆ ಅವಕಾಶ ಕಲ್ಪಿಸಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಕೆಲಸದ ಸಮಯ ನಿಗದಿ ಪಡಿಸಲಾಗಿದೆ. ಹೀಗಾಗಿ ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!