ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಸೇವೆ ಲಭ್ಯ

 ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಸೇವೆ ಲಭ್ಯ
Share this post

ಉಡುಪಿ, ಎಪ್ರಿಲ್ 29, 2021: ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಕೋವಿಡ್ ರೋಗಿಗಳನ್ನು ಮತ್ತು ಹಳೆಯ ಕಟ್ಟಡದಲ್ಲಿ ನಾನ್ ಕೋವಿಡ್ ಒಳರೋಗಿಗಳನ್ನು ದಾಖಲಿಸಿ, ಉಳಿದ ಸೇವೆಗಳಾದ ನಾನ್ ಕೋವಿಡ್ ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಪ್ರಯೋಗಾಲಯ ಸೇವೆ, ಕ್ಷ-ಕಿರಣ ಸೇವೆ, ಫೀವರ್ ಕ್ಲನಿಕ್, ಡಯಾಲಿಸಿಸ್ ವಿಭಾಗ, ಎ.ಆರ್.ಟಿ ಸೆಂಟರ್, ಐ.ಸಿ.ಟಿ.ಸಿ ವಿಭಾಗ, ಎಂ.ಎಲ್ ಸಿ ಸೇವೆ, ಪೋಸ್ಟ್ ಮಾರ್ಟಮ್ ಸೇವೆ, ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮಗಳನ್ನು ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಸದರಿ ಆಸ್ಪತ್ರೆಯಲ್ಲಿಯೇ ನಿರ್ವಹಿಸಲಾಗುತ್ತಿದೆ.

ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಕಲಾಮಂದಿರದಲ್ಲಿ ಕೋವಿಡ್-19 ಲಸಿಕಾಕರಣ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!