ಮುರಾರಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಮನವಿ

 ಮುರಾರಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಮನವಿ
Share this post

ಮಂಗಳೂರು, ಎಪ್ರಿಲ್ 13, 2021: ಮುರಾರಿ ಸಮುದಾಯದ ಜನರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಈ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಮುರಾರಿ ಸಮುದಾಯದವರು ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ. ಟಿ. ಸುವರ್ಣ, ಪುತ್ತೂರಿನ ಪ್ರಸಿದ್ದ ವೈದ್ಯರಾದ ಪ್ರಸಾದ್ ಭಂಡಾರಿ ಹಾಗೂ ಮುರಾರಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮನವಿಯಲ್ಲಿ ಮುರಾರಿ ಜಾತಿಗೆ ಸೇರಿದ ಜನಾಂಗದವರು 4 ತಲೆಮಾರಿನ ಹಿಂದೆ ಕೇರಳದಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿರುತ್ತಾರೆ. ಪುತ್ತೂರು ತಾಲೂಕಿನ ಈಶ್ವರ ಮಂಗಲ, ಸುಳ್ಯ, ಕಡಬ ತಾಲೂಕಿನ ನೆಲ್ಯಾಡಿ, ಮಡಿಕೇರಿ ಹಾಗೂ ಮೈಸೂರಿನಲ್ಲಿ ಸದರಿ ಜಾತಿಗೆ ಸೇರಿದ ಸುಮಾರು 1,500 ಜನರು ನೆಲೆಸಿರುತ್ತಾರೆ.

ಮುರಾರಿ ಸಮುದಾಯದ ಜನರು ಶೈಕ್ಷಣಿಕವಾಗಿ ತೀರಾ ಹಿಂದುಳಿದವರಾಗಿದ್ದು, ಅವರುಗಳು ಕುಲ ಕಸುಬಾಗಿ ಮಣ್ಣಿನ ಕುಸುರಿ, ಬುಟ್ಟಿ ಹೆಣೆಯುವುದನ್ನು ಅಳವಡಿಸಿಕೊಂಡಿರುವುದಲ್ಲದೇ ಜೀವನ ನಿರ್ವಹಣೆಗಾಗಿ ಹೆಚ್ಚಿನ ಜನರು ಕೂಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಈ ಜನಾಂಗದವರ ಮಾತೃ ಭಾಷೆ ಮಲಯಾಳಂ.

Subscribe to our newsletter!

Other related posts

error: Content is protected !!