ಇ ಸ್ಯಾಂಡ್ ಆಪ್ ಮೂಲಕ ಮರಳು ಲಭ್ಯ

 ಇ ಸ್ಯಾಂಡ್ ಆಪ್ ಮೂಲಕ ಮರಳು ಲಭ್ಯ
Share this post

ಉಡುಪಿ, ಮಾರ್ಚ್ 15, 2021:   ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೆ ನಂ 180, 157, 189 ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 4 ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174, 56 ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್ ಸಂಖ್ಯೆ 6 ರಲ್ಲಿ ಮರಳನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ SAND APP  ನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ.

ಅದ್ದರಿಂದ  ಸದರಿ ಮರಳನ್ನು ಪಡೆದುಕೊಳ್ಳಲು ಇಚ್ಚಿಸುವವವರು  UDUPI E-SAND APP ಮುಖಾಂತರ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ  , ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ , ರಜತಾದ್ರಿ, A ಬ್ಲಾಕ್, ಮೊದಲನೇ ಮಹಡಿ, ಮಣಿಪಾಲ, ಉಡುಪಿ ಜಿಲ್ಲೆ, ಉಡುಪಿ, ದೂರವಾಣಿ ಸಂಖ್ಯೆ: 0820-2572333, UDUPI E-SAND APP ದೂರವಾಣಿ ಸಂಖ್ಯೆ – 6366248666, 6366743888, 6366871888 ಯನ್ನು  ಸಂಪರ್ಕಿಸಬಹುದಾಗಿದೆ  ಎಂದು ಹಿರಿಯ ಭೂವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಉಡುಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!