ಕಾರವಾರ: ಫೆ. 4 ರಂದು ರಸ್ತೆ ಸಂರಕ್ಷಣಾ ಸಮಿತಿ ಸಭೆ

 ಕಾರವಾರ: ಫೆ. 4 ರಂದು ರಸ್ತೆ ಸಂರಕ್ಷಣಾ ಸಮಿತಿ ಸಭೆ
Share this post

ಕಾರವಾರ ಫೆ. 3, 2021: ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಫೆ. 4 ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ರಸ್ತೆ ಸಂರಕ್ಷಣಾ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ‘ರಸ್ತೆ ಸಂರಕ್ಷಣಾ ಸಮಿತಿಯ ಸಭೆ’ ನಡೆಯಲಿದೆ.

ಸಭೆಗೆ ಅಧಿಕಾರಿಗಳು ತಮ್ಮ ಪ್ರತಿನಿಧಿಗಳನ್ನ ನೇಮಿಸದೇ ಖುದ್ದಾಗಿ ಹಾಜರಾಗಬೇಕು. ಅನಿವಾರ್ಯತೆ ಇದ್ದಲ್ಲಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆಯಬೇಕು.

ಜೊತೆಗೆ 2020ರ ಸೆ. 15ರಂದು ನಡೆದ ರಸ್ತೆ ಸಂರಕ್ಷಣಾ ಸಮಿತಿಯ ಸಭೆಯ ನಡಾವಳಿ ಹಾಗೂ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ತಿಳಿಸಿರುವ ಕರಡು ಕ್ರಿಯಾ ಯೋಜನೆಯ ಪ್ರಕಾರ ಸಮಿತಿಯ ಎಲ್ಲ ಸದಸ್ಯರು 2021ರ ಜ. 31 ರೊಳಗಿನ ಅನುಸರಣಾ ವರದಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ರಸ್ತೆ ಸಂರಕ್ಷಣಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!