ಅಖಿಲ ಭಾರತ ಕನ್ನಡ ಕಾವ್ಯ ಕಮ್ಮಟ’ಕ್ಕೆ ಅರ್ಜಿ ಆಹ್ವಾನ

ಕಾರವಾರ, ಫೆಬ್ರವರಿ 02, 2021: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮಾರ್ಚ್‍ನಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ‘ಅಖಿಲ ಭಾರತ ಕನ್ನಡ ಕಾವ್ಯ ಕಮ್ಮಟ’ ನಡೆಸಲು ಉದ್ದಶಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ದೇಶದ ಎಲ್ಲ ಭಾಗದ 20 ರಿಂದ 40 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, ಅಕಾಡೆಮಿಯ ವೆಬ್‍ಸೈಟ್ http://karnatakasahityaacademy.org ನಲ್ಲಿ ಅರ್ಜಿ ಪಡೆದು ಫೆ. 15 ರೋಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಣಿ ಸಂಖ್ಯೆ: 080-22211730, 080-22106460ಗೆ ಸಂಪರ್ಕಿಸಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್., ಅವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.