ಮೇ 24ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ
ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪಿಯು ಪರೀಕ್ಷೆಗಳು ಮೇ 24ರಿಂದ ಜೂ. 10ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕಿನ ಪ್ರಕರಣದ ಹಿನ್ನೆಲೆಯಲ್ಲಿ 2020-21ನೇ ವರ್ಷದ ದ್ವಿತೀಯ ಪಿಯು ತರಗತಿಗಳು ತಡವಾಗಿ ಅಂದರೆ 2021ನೇ ಜನವರಿ 1ರಂದು ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಲಾ ಶೈಕ್ಷಣಿಕ ವರ್ಷದಲ್ಲಿ ದೊರೆತ ಅವಧಿಗೆ ಅನುಗುಣವಾಗಿ ಪಿಯು ಪರೀಕ್ಷೆಗಳಿಗೆ ಪರೀಕ್ಷಾಭಿಮುಖವಾಗಿ ಈಗಾಗಲೇ ಪಠ್ಯಾಂಶ ನಿಗದಿಯಾಗಿದೆ ಎಂದು ತಿಳಿಸಿದರು.
ನೀಟ್, ಜೆಇಇ ಗಳಂತಹ ಮುಂದಿನ ತರಗತಿಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು ಎಂದು ಸಚಿವರು ತಿಳಿಸಿದರು.
24-05-2021- ಭೌತಶಾಸ್ತ್ರ/ ಇತಿಹಾಸ,
25-05-2021 ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್…,
26-05-2021 ಭೂಗರ್ಭಶಾಸ್ತ್ರ/ ಗೃಹ ವಿಜ್ಞಾನ/ ಬೇಸಿಕ್ ಮ್ಯಾತ್ಸ್ /ತರ್ಕಶಾಸ್ತ್ರ,
27-05-2021 ಗಣಿತ/ಅಕೌಂಟೆನ್ಸಿ/ಐಚ್ಛಿಕ ಕನ್ನಡ,
28-05-2021 ಉರ್ದು/ ಸಂಸ್ಕೃತ,
29-05-2021 ರಾಜ್ಯಶಾಸ್ತ್ರ,
30-05-2021 ಭಾನುವಾರ –ರಜೆ,
31-05-2021 ರಸಾಯನಶಾಸ್ತ್ರ/ವ್ಯವಹಾರ ಅಧ್ಯಯನ/ಶಿಕ್ಷಣ,
01-06-2021 ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ,
02-06-2021 ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ ಮನಃಶಾಸ್ತ್ರ,
03-06-2021 ಹಿಂದಿ ಭಾಷೆ,
04-06-2021 ಅರ್ಥಶಾಸ್ತ್ರ,
05-06-2021 ಕನ್ನಡ ಭಾಷೆ,
06-06-2021 ಭಾನುವಾರ –ರಜೆ,
07-06-2021 ಇಂಗ್ಲಿಷ್ ಭಾಷೆ,
08-06-2021 ಮಾಹಿತಿ ತಂತ್ರಜ್ಞಾನ/ಹೆಲ್ತ್ಕೇರ್/ವೆಲ್ನೆಸ್ಬ್ಯೂಟಿ.. ಸೇರಿದಂತೆ ಇತರೆ ವಿಷಯಗಳು,
09-06-2021 ಸ್ಟ್ಯಾಟಿಟಿಕ್ಸ್/ಸಮಾಜಶಾಸ್ತ್ರ ಮತ್ತು
10-06-2021 ಭೂಗೋಳ ಪತ್ರಿಕೆಗಳ ಪರೀಕ್ಷೆಗಳು ನಡೆಯಲಿವೆ ಎಂದರು.