ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ‘ಹೂಡಿಕೆಯ ಒಳನೋಟಗಳು’ ಕುರಿತು ಅತಿಥಿ ಉಪನ್ಯಾಸ

 ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ‘ಹೂಡಿಕೆಯ ಒಳನೋಟಗಳು’ ಕುರಿತು ಅತಿಥಿ ಉಪನ್ಯಾಸ
Share this post

ಬೆಳ್ತಂಗಡಿ, ಜನವರಿ 12, 2021: ಹೂಡಿಕೆಯ ಒಳನೋಟಗಳ ಕುರಿತು ಅತಿಥಿ ಉಪನ್ಯಾಸವನ್ನು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಪಿಜಿ ಅಧ್ಯಯನ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶವು ಆಯೋಜಿಸಿತು.

ಹೂಡಿಕೆಯ ವಿವಿಧ ಅಂಶಗಳನ್ನು ವಿವರಿಸಿದ ಸಂಪನ್ಮೂಲ ವ್ಯಕ್ತಿ ವತ್ಸ್ಯ ಇಂಟರ್ ನ್ಯಾಷನಲ್ ನ ಅರ್ಥಶಾಸ್ತ್ರ ಮತ್ತು ಹಣಕಾಸು ಮಾರುಕಟ್ಟೆ ವಿಭಾಗ ಶಿಕ್ಷಕ ನೀಲ್ ದೀಪ್ ಗೋಸ್ವಾಮಿ, ಹಣದುಬ್ಬರದ ಜೊತೆಗೆ ಸೆನ್ಸೆಕ್ಸ್, ಸ್ಟಾಕ್ ಮಾರ್ಕೆಟ್ ಮತ್ತು ಮ್ಯೂಚುವಲ್ ಫಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿದ್ಯಾರ್ಥಿಗಳು ತಮ್ಮ ಹಣವನ್ನು ಮ್ಯೂಚುವಲ್ ಫಂಡ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಸಹ ಹೂಡಿಕೆ ಮಾಡಬಹುದು ಎಂದು ಹೇಳಿದ ಅವರು ಮ್ಯೂಚುವಲ್ ಫಂಡ್‌ಗಳಿಂದ ನೀಡಲಾಗುವ ವಿಭಿನ್ನ ಯೋಜನೆಗಳ ಬಗ್ಗೆ ಸಲಹೆ ನೀಡಿದರು.

“ಜ್ಞಾನಕ್ಕೆ ಅಡೆತಡೆಗಳಿಲ್ಲ. ನಾವು ಅದನ್ನು ಎಲ್ಲಾ ಕಡೆಗಳಿಂದ ಸಂಪಾದಿಸಿಕೊಳ್ಳಬಹುದು,” ಎಂದು ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಂ.ಜೋಸೆಫ್ ಹೇಳಿದರು. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ ಪಿಜಿ ವಾಣಿಜ್ಯ ಅಧ್ಯಯನ ವಿಭಾಗದ ಪ್ರಯತ್ನವನ್ನೂ ಶ್ಲಾಘಿಸಿದರು.

ಪಿಜಿ ವಾಣಿಜ್ಯ ವಿಭಾಗದ ಎಚ್‌ಒಡಿ ಶ್ರೀಮತಿ ಪಾವನ ರೈ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಉಪನ್ಯಾಸಕಿ ಶ್ರೀಮತಿ ಮಹಿತಾ ಧನ್ಯವಾದಗಳನ್ನು ಸಮರ್ಪಿಸಿದರು.

-ಶ್ರೇಯಸ್ ಅಂತರ
ಫೈನಲ್ ಎಂ ಕಾಮ್
ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು

Subscribe to our newsletter!

Other related posts

error: Content is protected !!