ಬೆಳೆ ಸಮೀಕ್ಷೆ- ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

 ಬೆಳೆ ಸಮೀಕ್ಷೆ- ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
Share this post

ಉಡುಪಿ, ನ 06 : ಜಿಲ್ಲೆಯಲ್ಲಿ ಜಿ.ಪಿ.ಎಸ್ ಆಧಾರಿತ ಮುಂಗಾರು ಹಂಗಾಮಿನ ಬೆಳೆ
ಸಮೀಕ್ಷೆ ಕಾರ್ಯವು ಕೈಗೊಳ್ಳಲಾಗಿರುತ್ತದೆ.

ಬೆಳೆ ಸಮೀಕ್ಷೆಯಲ್ಲಿ ನಮೂದಾದ ಬೆಳೆಗಳ ಬಗ್ಗೆ ರೈತರಿಗೆ ಆಕ್ಷೇಪಣೆ ಇದ್ದಲ್ಲಿ ಬೆಳೆ ಸಮೀಕ್ಷೆ ವೆಬ್ ಪೋರ್ಟಲ್ www.cropsurvey.karnataka.gov.in ಅಥವಾ ಮೊಬೈಲ್ ಆಪ್ Bele Darshak Karnataka-2020-21 ಮೂಲಕ ಆಕ್ಷೇಪಣೆ ಸಲ್ಲಿಸಬಹುದು.

ರೈತರಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಸಂಬಂಧಿಸಿದ ಗ್ರಾಮದ ಮೇಲ್ವಿಚಾರಕರಿಂದ ಪರಿಶೀಲಿಸಿ, ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!