ಬೆಳೆ ದರ್ಶಕ್ ಆ್ಯಪ್-2020: ಬೆಳೆಯ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ

 ಬೆಳೆ ದರ್ಶಕ್ ಆ್ಯಪ್-2020:  ಬೆಳೆಯ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ
Share this post

ಮಂಗಳೂರು ಅ 12 : ಮಂಗಳೂರು ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವುದರಿಂದ ಬೆಳೆ ಮಾಹಿತಿ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಬೆಳೆ ದರ್ಶಕ್ – 2020 ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ರೈತರಿಗೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 15 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.

ರೈತರು ಬೆಳೆ ದರ್ಶಕ ಮೊಬೈಲ್ ಆ್ಯಪ್ ತಂತ್ರಾಂಶದ ಮೂಲಕ ಬೆಳೆ ಮಾಹಿತಿ / ವಿಸ್ತೀರ್ಣದ ಮಾಹಿತಿ ಕುರಿತು ಆಕ್ಷೇಪಣೆ ಸಲ್ಲಿಸಬಹುದು.

ಬೆಳೆ ಸಮೀಕ್ಷೆ ಮಾಹಿತಿ ಪ್ರಕಾರ ಯಾವುದೇ ಬೆಳೆ ಮಾಹಿತಿ ಲಭ್ಯವಿಲ್ಲದ ರೈತರು ತಾವು ಬೆಳೆ ಬೆಳೆದಿರುವುದಾಗಿ ಹಾಗೂ ಬೆಳೆಯ ವ್ಯತ್ಯಾಸವಿದ್ದಲ್ಲಿ,  ಬೆಳೆ ಮಾಹಿತಿ ಪ್ರಕಾರ ಪಾಳು/ ಕಟಾವಾದ ಪ್ರದೇಶ ಎಂದು ನಮೂದಿಸಿದ್ದು, ರೈತರು ತಾವು ಬೆಳೆ ಬೆಳೆದಿರುವುದಾಗಿ ಆಕ್ಷೇಪಣೆ ವ್ಯಕ್ತಪಡಿಸಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!