ಕರ್ನಾಟಕ ಆರ್ಯ ವೈಶ್ಯ ಸಮುದಾಯಅಭಿವೃದ್ಧಿ ನಿಗಮ – ಸಾಲ ಸೌಲಭ್ಯ ಪಡೆಯಲುಅರ್ಜಿಆಹ್ವಾನ
ಮಂಗಳೂರು ಅ 10 :- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಪ್ರಸ್ತುತ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ವೆಬ್ ಸೈಟ್ kacdc.karnataka.gov.in ನಲ್ಲಿ ನವೆಂಬರ್ 15 ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ನಿಂದ ಪಡೆದು ಸಂಬಂಧಿಸಿದ ದಾಖಲಾತಿಗಳೊಂದಿಗೆ ನಿಗಮದ ಜಿಲ್ಲಾ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್ ಬಸ್ಸು ನಿಲ್ದಾಣದ ಹತ್ತಿರ, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ: 9448451111, ಜಿಲ್ಲಾ ಕಚೇರಿ ದೂ. ಸಂಖ್ಯೆ: 0824-2456544 ನ್ನು ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದ್ದಾರೆ.
