ವಂಚನೆಗಳು ಕಂಡು ಬಂದಲ್ಲಿ ದೂರು ನೀಡಿ: ಒಂಬುಡ್ಸಮನ್ ಆರ್ ಜಿ ನಾಯಕ

 ವಂಚನೆಗಳು ಕಂಡು ಬಂದಲ್ಲಿ ದೂರು ನೀಡಿ: ಒಂಬುಡ್ಸಮನ್ ಆರ್ ಜಿ ನಾಯಕ
Share this post

ಕಾರವಾರ ಸೆ. 19: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ-2005ರ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ವಂಚನೆಗಳು ಕಂಡು ಬಂದಲ್ಲಿ ದೂರು ನೀಡುವಂತೆ ಒಂಬುಡ್ಸಮನ್ ಆರ್ ಜಿ ನಾಯಕ ತಿಳಿಸಿದ್ದಾರೆ.

ಮಾರ್ಗಸೂಚಿಗಳ ಉಲ್ಲಂಘನೆ, ಗುತ್ತಿಗೆದಾರರು, ಯಂತ್ರಗಳ ಬಳಕೆ, ಕಳಪೆ ಅಪೂರ್ಣ ಕಾಮಗಾರಿ, ಹಣದುರುಪಯೋಗ, ಕೆಲಸ ನಿರಾಕರಣೆ, ಉದ್ಯೋಗ ಚೀಟಿ ಪಂಚಾಯತಿ ಸುಪರ್ಧಿಯಲ್ಲಿ ಇಟ್ಟುಕೊಳ್ಳುವುದು, ಕನಿಷ್ಠ ಕೂಲಿ ಪಾವತಿಯಲ್ಲಿ ಕಡಿತ, ವಿಳಂಬ ಸೌಲಭ್ಯಗಳ ನೀಡಿಕೆಯಲ್ಲಿ ನಿರಾಕರಣೆ ವಂಚನೆ ಮೊದಲಾದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಸಾರ್ವಜನಿಕರು, ಕೂಲಿ ಕಾರ್ಮಿಕರು ಒಂಬುಡ್ಸಮನ್ ಕಾರ್ಯಾಲಯಕ್ಕೆ ದೂರು ನೀಡಬಹುದು

ದೂರು ನೀಡಬೇಕಾದ ವಿಳಾಸ: ಒಂಬುಡ್ಸಮನ್ ಕಾರ್ಯಾಲಯ, ಅಭಿಲೇಖಾಲಯ ಕಟ್ಟಡ, ಜಿಲ್ಲಾ ಪಂಚಾಯತ ಕಚೇರಿ ಕಾರವಾರ ವಿಳಾಸಕ್ಕೆ ಅಂಚೆ ಮೂಲಕ ದೂರುದಾರರ ಹೆಸರು ಮತ್ತು ಸಹಿ, ಸಂಪೂರ್ಣ ವಿಳಾಸವನ್ನು ಸೂಕ್ತ ದಾಖಲೆಗಳೊಂದಿಗೆ ಲಿಖಿತ ದೂರು ನೀಡಬಹುದಾಗಿದೆ.

ಇ-ಮೇಲ್ ವಿಳಾಸ: [email protected] ಹಾಗೂ ದೂರವಾಣಿ ಸಂಖ್ಯೆ ಕಚೇರಿ: 08382-220908, ಮೊಬೈಲ್ ಸಂಖ್ಯೆ: 9481853117 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಒಂಬುಡ್ಸಮನ್ ಆರ್ ಜಿ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!