ಉಡುಪಿ, ನ 22: ಶ್ರೀಕೃಷ್ಣ ಮಠದಲ್ಲಿ, ಮಕರ ಸಂಕ್ರಾಂತಿಯಂದು ಶ್ರೀಕೃಷ್ಣನ ಉತ್ಸವಕ್ಕಾಗಿ ಬ್ರಹ್ಮರಥವನ್ನು ತಯಾರುಗೊಳಿಸುವದಕ್ಕಾಗಿ, ದೇವರ ಪ್ರಾರ್ಥನೆ ನಡೆಸಿ ಸಂಪ್ರದಾಯದಂತೆ ರಥದ ಜಿಡ್ಡೆಯನ್ನು ರಥಬೀದಿಯಲ್ಲಿ ಹೊರತಂದಿರಿಸಿಲಾಯಿತು. ಈ ಸಂದರ್ಭದಲ್ಲಿ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತಾಯರು, ವ್ಯವಸ್ಥಾಪಕರಾದ ಗೋವಿಂದರಾಜ್ , ಪ್ರದೀಪ್ ರಾವ್, ಕಡೆಕಾರ್ ಶ್ರೀಶ ಭಟ್ ಮೊದಲಾದವರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.Read More
ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಗೆ ಎಲೆ ಸುರಂಗ ಹಾಗೂ ಕಾಯಿಕೊರೆಯುವ /ಹೂಜಿ ಹುಳುವಿನ ಕೀಟವು ತುಂಬಾ ಹಾನಿಯನ್ನುಂಟು ಮಾಡುತ್ತಿದ್ದುRead More
ಮಂಗಳೂರು ನ 21: ನವೆಂಬರ್ 26ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪ್ರಾದೇಶಿಕ ಪ್ರಾಧಿಕಾರದ ಸಭೆಯು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ.Read More
ಉಡುಪಿ, ನ 21: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಮತ್ತು ಕಾಪು ತಾಲೂಕಿನ ಮಲ್ಲಾರುವಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ನವೆಂಬರ್ 30 ರ ಒಳಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಶಿವಳ್ಳಿ, ಅಲೆವೂರು ರಸ್ತೆ, ಮಣಿಪಾಲ, ಉಡುಪಿ […]Read More
ಮಂಗಳೂರು ನ 21: ಕರ್ನಾಟಕ ಕುಕ್ಕುಟ ಮತ್ತು ಜಾನುವಾರು ಆಹಾರ ತಯಾರಿಕೆ ಮತ್ತು ಮಾರಾಟ. ನಿಯಂತ್ರಣ ಆಜ್ಞೆ 1987ರಂತೆ ಕೋಳಿ ಮತ್ತು ಪಶು ಆಹಾರಗಳ ಉತ್ಪಾದಕರು ಮತ್ತು ಮಾರಾಟಗಾರರು 2020-21ನೇ ಸಾಲಿನಿಂದ ನೂತನ ಪರವಾನಿಗೆ ಅಥವಾ ನವೀಕರಣಗಳಿಗೆ ಪಶುಸಂಗೋಪನಾ ಇಲಾಖೆಯಿಂದ ವಿವಿಧ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಪಶುವೈದ್ಯಧಿಕಾರಿ ಅಥವಾ ಹಿರಿಯ ಪಶು ವೈದ್ಯಧಿಕಾರಿಗಳನ್ನು ರಾಜ್ಯಾದ್ಯಂತ ಅವರ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರ ಮತ್ತು ಮಾರಾಟ ಕೇಂದ್ರಗಳ ಪರಿಶೀಲನೆಗಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿರುವ ಕುಕ್ಕುಟ ಮತ್ತು […]Read More
ಉಡುಪಿ, ನ 21: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಓಕುಡೆ ಡಯೋಗ್ನೋಸ್ಟಿಕ್ಸ್ ಸೆಂಟರ್ ಮತ್ತು ಅಭಿನೇತ್ರ ಕಣ್ಣಿನ ಕ್ಲಿನಿಕ್ ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ಹಾಗೂ ಕಣ್ಣಿನ ತಪಾಸಣಾ ಶಿಬಿರವು ನವೆಂಬರ್ 22 ಮತ್ತು 29 ಹಾಗೂ ಡಿಸೆಂಬರ್ 6 ಮತ್ತು 13 ರಂದು ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ಕುಂಜಿಬೆಟ್ಟಿನ ಓಕುಡೆ ಡಯೋಗ್ನೋಸ್ಟಿಕ್ಸ್ ಸೆಂಟರ್ನಲ್ಲಿ ಜರುಗಲಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ರೆಡ್ಕ್ರಾಸ್ನ ಪ್ರಕಟಣೆ ತಿಳಿಸಿದೆ.Read More
ಉಡುಪಿ ನ 21: ಸುಮಾರು ಎರಡು ವರ್ಷಗಳ ಹಿಂದೆ ಉಡುಪಿ ಮಲ್ಪೆ ಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ “ಸುವರ್ಣ ತ್ರಿಭುಜ” ಬೋಟ್ ನಲ್ಲಿದ್ದ 7 ಜನ ಮೀನುಗಾರರ ಕುಟುಂಬಕ್ಕೆ ತಲಾ ರೂ. 10 ಲಕ್ಷದ ಪರಿಹಾರದ ಚೆಕ್ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ವಿವರಿಸಿದರು. ಮುಖ್ಯಮಂತ್ರಿಗಳು ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ – 2020 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಸೆಂಬರ್ 13 2018 ರಂದು ಉಡುಪಿಯ ಮಲ್ಪೆ […]Read More
ಉಡುಪಿ, ನ 21: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹಾವು ಕಡಿತದಿಂದ 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ನವಂಬರ್ 20 ರಂದು ಕುಂದಾಪುರ ತಾಲೂಕಿನ ಯಡಮೊಗ್ಗೆ ಗ್ರಾಮದ ವಾಟಾರ ಹಾಡಿ ಎಂಬಲ್ಲಿ ಕು. ಪ್ರಥ್ವಿ (11) ತನ್ನ ತಾಯಿ ಶ್ರೀಮತಿ ಸುಮತಿ ಜೊತೆ ಮನೆಯ ಹತ್ತಿರದ ತೋಟಕ್ಕೆ ಹೋದಾಗ ಅಲ್ಲಿ ಯಾವುದೋ ವಿಷ ಪೂರಿತ ಹಾವು ಕಚ್ಚಿತು. ಮಗುವನ್ನು ಕೂಡಲೆ ಕುಂದಾಪುರ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಮ್ ಸಿ ಆಸ್ಪತ್ರೆಗೆ ಹೋಗಿದ್ದು […]Read More
ಉಡುಪಿ, ನ 20: ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವ್ಯಾಪ್ತಿಯ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ದಾಳಿ ನಡೆಸಿ 24 ಪ್ರಕರಣ ದಾಖಲಿಸಿ ರೂ. 4100 ದಂಡ ವಸೂಲಿ ಮಾಡಲಾಯಿತು. ದಾಳಿಯಲ್ಲಿ ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ವಾಸುದೇವ್, ಕಾರ್ಕಳ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಕಾರ್ಕಳದ ಹಿರಿಯ ಆರೋಗ್ಯ ಸಹಾಯಕ ಶಿವರಾಮ್ ಭಟ್, ಹಿರಿಯ ಆಹಾರ […]Read More
ಉಡುಪಿ, ನ 20: ಪ್ರಸ್ತುತ ಉಡುಪಿಯಲ್ಲಿರುವ ಜಿಲ್ಲಾಸ್ಪತ್ರೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲು ಲಭ್ಯವಿರುವ ಸ್ಥಳದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ನಡೆಸಿದರು. ಎರಡು ವಾರಗಳ ಹಿಂದೆ ಕ್ಯಾಬಿನೆಟ್ 115 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ ಕಾರ್ಯಕ್ಕೆ ಒಪ್ಪಿಗೆ ನೀಡಿತ್ತು. ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ, ನೂತನ ಜಿಲ್ಲಾಸ್ಪತ್ರೆ ನಿರ್ಮಿಸಲು ಅಗತ್ಯವಿರುವ ಸ್ಥಳ ಲಭ್ಯವಿದ್ದು, ಇಲ್ಲಿಯೇ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನೀಲ ನಕ್ಷೆಯನ್ನು ಸಿದ್ಧಪಡಿಸುವಂತೆ […]Read More