ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಏಡ್ಸ್ ಮಾಹಿತಿ ಮತ್ತು ಭಿತ್ತಿಚಿತ್ರ ರಚನಾ ಸ್ಪರ್ಧೆ
ಶಿರ್ವ, ಡಿ 03, 2021: ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಎನ್.ಎಸ್.ಎಸ್. ಘಟಕ ಮತ್ತು ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಇಂದು ಕಾಲೇಜಿನ ಸಭಾಗಂಣದಲ್ಲಿ ಏಡ್ಸ್ ಮಾಹಿತಿ ಮತ್ತು ಭಿತ್ತಿಚಿತ್ರ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಮುದಾಯ ಆರೋಗ್ಯ ಕೇಂದ್ರದ ಶ್ರೀಮತಿ ವಸಂತಿ ಏಡ್ಸ್ ರೋಗದ ಲಕ್ಷಣಗಳು, ತಡೆಯುವಿಕೆಯಲ್ಲಿ ಯುವಜನರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಏಡ್ಸ್ ಅಂಟುರೋಗವಲ್ಲ. ಆದ್ದರಿಂದ ರೋಗಿಗಳನ್ನು ಮಾನವೀಯತೆಯಿಂದ ನೋಡಿಕೊಂಡು ಅಸಮಾನತೆಯನ್ನು ತೊಲಗಿಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ನಯನ ಮಾತನಾಡಿ ಉತ್ತಮ ಚಾರಿತ್ರ್ಯವನ್ನು ನಾವು ಹೊಂದಿದ್ದರೆ ಏಡ್ಸ್ ಅನ್ನು ದೂರ ಇಡಬಹುದು. ಆದ್ದರಿಂದ ಉತ್ತಮ ಚಾರಿತ್ರ್ಯದ ಮೂಲಕ ಸತ್‍ಪ್ರಜೆಗಳಾಗುವಂತೆ ಪ್ರಯತ್ನಿಸಿ ಎಂದು ನುಡಿದರು.
ಎನ್.ಎಸ್.ಎಸ್ ಘಟಕದ ಅಧಿಕಾರಿ ಪ್ರೊ.ಟಿ. ಮುರುಗೇಶಿ ಅತಿಥಿಗಳನ್ನು ಪರಿಚಯಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿ ವಿಶಾಲ್ ರೈ ಪುತ್ತೂರು ಸ್ವಾಗತಿಸಿದರು.
ಕು. ವಿದ್ಯಾ ಧನ್ಯವಾದ ಸಮರ್ಪಿಸಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಬಸಪ್ಪ ಭಿತ್ತಿಚಿತ್ರ ರಚನಾ ಸ್ಫರ್ಧೆಯ ಉಸ್ತುವಾರಿಯನ್ನು ವಹಿಸಿದ್ದರು. ಭಿತ್ತಿಚಿತ್ರ ರಚನಾ ಸ್ಪರ್ಥೆಯಲ್ಲಿ 53 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.