ಇ-ಕೆವೈಸಿ: ನ.30 ವರೆಗೆ ಕಾಲಾವಕಾಶ

 ಇ-ಕೆವೈಸಿ: ನ.30 ವರೆಗೆ ಕಾಲಾವಕಾಶ
Share this post

ಮಂಗಳೂರು ನ.23, 2021: ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದವರ ಇ-ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಮರುಸಂಗ್ರಹಿಸಲು ಇದೇ ನ.30ವರೆಗೆ ಕಾಲಾವಕಾಶ ನೀಡಲಾಗಿದೆ.

ಪಡಿತರ ಚೀಟಿಯಲ್ಲಿ 5 ಹಾಗೂ 15 ವರ್ಷ ತುಂಬಿದ ಮಕ್ಕಳ ಜೀವಮಾಪನವನ್ನು ಆಧಾರ್‍ನಲ್ಲಿ ನಮೂದಿಸಿ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಬೇಕು. ಇ-ಕೆವೈಸಿ ಮಾಡದಂತಹ ಪಡಿತರ ಚೀಟಿದಾರರ ಹೆಸರನ್ನು ಪಡಿತರ ಚೀಟಿಯಿಂದ ಕೈಬಿಡಲಾಗುವುದು. ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ  ಎಲ್ಲಾ ಸದಸ್ಯರ  ಇ-ಕೆವೈಸಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಪಡಿತರ ಚೀಟಿ ಸದಸ್ಯರ ಇ-ಕೆವೈಸಿಗೆ ಲಭ್ಯವಾಗದಿದ್ದಲ್ಲಿ ಅಂತಹವರ ಮಾಹಿತಿಯನ್ನು ಸಕಾರಣಗಳೊಂದಿಗೆ  ನ್ಯಾಯಬೆಲೆ ಅಂಗಡಿಗೆ ಒದಗಿಸಬೇಕು.  

ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿಲ್ಲ. ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಪಡಿತರ ಪಡೆಯುವುದರಿಂದ ವಂಚಿತರಾಗದಂತೆ ಇದರ ಪ್ರಯೋಜನ ಪಡೆಯಲು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.               

Subscribe to our newsletter!

Other related posts

error: Content is protected !!