ಆರೋಗ್ಯ-ಪೋಷಣೆಯಲ್ಲಿ ಹಣ್ಣು, ತರಕಾರಿಗಳ ಕುರಿತು ರಾಷ್ಟ್ರೀಯ ವರ್ಚುಯಲ್ ಸಮ್ಮೇಳನ

 ಆರೋಗ್ಯ-ಪೋಷಣೆಯಲ್ಲಿ ಹಣ್ಣು, ತರಕಾರಿಗಳ ಕುರಿತು ರಾಷ್ಟ್ರೀಯ  ವರ್ಚುಯಲ್ ಸಮ್ಮೇಳನ
Share this post

ನ.8 ರಿಂದ 10 ರವರೆಗೆ ರಾಷ್ಟ್ರೀಯ ಸಮ್ಮೇಳನ

ಮಂಗಳೂರು, ನ 07, 2021: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅಂತಾರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷದ ಅಂಗವಾಗಿ ವರ್ಚುಯಲ್ ಮಾಧ್ಯಮದ ಮೂಲಕ “ಆರೋಗ್ಯ ಮತ್ತು ಪೋಷಣೆಯಲ್ಲಿ ಹಣ್ಣು ಮತ್ತು ತರಕಾರಿಗಳು” ಎಂಬ ವಿಷಯದ ಮೇಲೆ ನ.8 ರಿಂದ 10 ರವರೆಗೆ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆ ವಿಜ್ಞಾನ ಪ್ರಸಾರ, ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.

ಈ ಮೂರು ದಿನಗಳ ಸಮ್ಮೇಳನದಲ್ಲಿ ಪರಿಣತ ಸಂಪನ್ಮೂಲ ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಮತ್ತು ತಜ್ಞ ಸಮಿತಿ ಚರ್ಚೆಗಳನ್ನಲ್ಲದೇ ಪ್ರಗತಿಪರ ಕೃಷಿಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಮಂಡಿಸಲೂ ಸಹ ಅವಕಾಶವನ್ನು ಕಲ್ಪಿಸಲಾಗಿದೆ.

ವಿಶ್ವಸಂಸ್ಥೆಯ ಸರ್ವ ಸದಸ್ಯರ ಸಭೆಯು 2021ನೇ ವರ್ಷವನ್ನು ಅಂತಾರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷವೆಂದು ಘೋಷಿಸಿದೆ.

ಈ ಅಂತಾರಾಷ್ಟ್ರೀಯ ವರ್ಷವು ಮಾನವ ಪೋಷಣೆ, ಆಹಾರ ಭದ್ರತೆ ಮತ್ತು ಆರೋಗ್ಯದಲ್ಲಿ ಹಣ್ಣು ಮತ್ತು ತರಕಾರಿಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಒಂದು ವಿಶಿಷ್ಟ ಅವಕಾಶವನ್ನು ಒದಗಿಸಿದೆಯಲ್ಲದೇ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲೂ ಸಹ ಅನುವಾಗುವುದು.

ವೈವಿಧ್ಯ ಪೂರ್ಣ, ಸಮತೋಲಿತ ಮತ್ತು ಆರೋಗ್ಯಕರ ಆಹಾರ ಕ್ರಮ ಹಾಗೂ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಹಣ್ಣು ಮತ್ತು ತರಕಾರಿಗಳ ಸೇವನೆ, ಆಹಾರ ವ್ಯವಸ್ಥೆಯಲ್ಲಿ ಹಣ್ಣು ಮತ್ತು ತರಕಾರಿಗಳ ನಷ್ಟವನ್ನು ತಗ್ಗಿಸಲು ಹಾಗೂ ಒಳ್ಳೆಯ ಜೀವನಶೈಲಿಯನ್ನು ಪ್ರೋತ್ಸಾಹಿಸಲು ಸಹಕಾರಿಯಾಗುವುದು.

ಈ ಮೂರು ದಿನಗಳ ಸಮ್ಮೇಳನದಲ್ಲಿ ಪರಿಣತ ಸಂಪನ್ಮೂಲ ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಮತ್ತು ತಜ್ಞ ಸಮಿತಿ ಚರ್ಚೆಗಳನ್ನಲ್ಲದೇ ಪ್ರಗತಿಪರ ಕೃಷಿಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಮಂಡಿಸಲೂ ಸಹ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಸಮ್ಮೇಳನವನ್ನು ನ.8 ರ ಸೋಮವಾರ ಬೆಳಗ್ಗೆ 9.30 ಕ್ಕೆ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್. ಅಯ್ಯಪ್ಪನ್, ವಿಜ್ಞಾನ ಪ್ರಸಾರ್ ಸಂಸ್ಥೆಯ ನಿರ್ದೇಶಕ ಡಾ. ನಕುಲ್ ಪರಾಶರ್, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ. ಇಂದಿರೇಶ್, ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನಿವೃತ್ತ ಮಹಾನಿರ್ದೇಶಕ ಡಾ. ಎನ್.ಕೆ. ಕೃಷ್ಣಕುಮಾರ್ ಅವರು ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂsಸ್ಥೆಯ ನಿರ್ದೇಶಕ ಡಾ. ಬಿ.ಎನ್.ಎಸ್. ಮೂರ್ತಿ ಭಾಗವಹಿಸುವರು.

ನೋಂದಣಿ ಕೊಂಡಿ (Link) ಇಂತಿದೆ: https://forms.gle/ebk42ae16FUV5CC39

ಅಲ್ಲದೇ, ಅಕಾಡೆಮಿ ವೆಬ್ ತಾಣದಲ್ಲಿಯೂ (https://kstacademy.in/en/) ಸಹ ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!