ಶ್ರೀ ಮಂಗಳಾದೇವಿ ದೇವಸ್ಥಾನ: ಮಹಾ ರಥೋತ್ಸವ

 ಶ್ರೀ ಮಂಗಳಾದೇವಿ ದೇವಸ್ಥಾನ: ಮಹಾ ರಥೋತ್ಸವ
Share this post

ವರ್ಷಾವಧಿ ಜಾತ್ರ ಮಹೋತ್ಸವದ ಫಾಲ್ಗುಣಮಾಸ ಕೃಷ್ಣ ಪಕ್ಷದ ಇಂದಿನ ಮೂಲಾ ನಕ್ಷತ್ರದ ಸಪ್ತಮಿಯಂದು ಮಂಗಳಮ್ಮನಿಗೆ ಮಹಾ ರಥೋತ್ಸವದ ಸಂಭ್ರಮ.

ಜಾತ್ರೆಯ ಉತ್ಸವ ಪರ್ವಕಾಲದಲ್ಲಿ ನಡೆದ ನಾಲ್ಕೂ ದಿನಗಳ ಉತ್ಸವಾದಿ ಮಹೋತ್ಸವಗಳನ್ನು, ಪೂಜಾ ಕೈಂಕರ್ಯವನ್ನು, ಭಕ್ತರ ಸೇವಾದಿ ಪುನಸ್ಕಾರಗಳನ್ನು ಸಂತೋಷದಿಂದ ಸ್ವೀಕಾರ ಮಾಡಿಕೊಂಡು ಪ್ರೀತ್ಯರ್ಥಳಾಗಿ ನಾವು ಪ್ರಾರ್ಥಿಸಿದ ಕಾಮಿತಾರ್ಥವನ್ನೆಲ್ಲ ಅನುಗ್ರಹಿಸಿ ಇಂದಿನ ರಥೋತ್ಸವದ ಪುಣ್ಯ ದಿನದಂದು ಮನೋಜ್ಞಯುತ ಭವ್ಯ ಅಲಂಕಾರದಲ್ಲಿ ಶ್ರೀ ಮಂಗಳಾದೇವಿಯು ವೈಭವದಿಂದ ತನ್ನ ದರ್ಶನ ಭಾಗ್ಯವನ್ನು ಇದೀಗ ನಮ್ಮೆಲ್ಲರಿಗೆ ಅನುಗ್ರಹಿಸಿದ್ದಾಳೆ.

ಮೂಲಾ ನಕ್ಷತ್ರದ ಸಪ್ತಮಿಯ ರಥ ಸವಾರಿಯ ಪುಣ್ಯ ದಿನದಂದು ‘ನೀಲ ಮೇಘದಂತೆ’ ನೇರಳೆ ಮಿಶ್ರಿತ ನೀಲಿ ಚೌಕುಳಿ ವರ್ಣವುಳ್ಳ ಸೀರೆಯನ್ನುತೊಟ್ಟು ರಾಜ ಕಳೆಯಿಂದ ತೇಜೋಮಯಳಾಗಿ ಪನ್ನಗ ಕಿರೀಟದ ಕೇಶಾಲಂಕಾರದಿಂದ ರತ್ನ ಖಚಿತ ಕಿರೀಟಾದಿ ಸ್ವರ್ಣಾಭರಣ ಭೂಷಣ ಪೀತಾಂಬರಗಳಿಂದ ಅಲಂಕೃತಳಾದ ಜಗನ್ಮಾತೆಯು ಚತುರ್ಭುಜದಿಂದ ಸುಶೋಭಿಸುತ್ತಾ ಸರ್ವಾಭರಣಯುಕ್ತಳಾಗಿ ಅಭಯ-ವರದ ಹಸ್ತಳಾದ ದೇವಿಯು ತನ್ನ ದ್ವಿಬಾಹುಗಳಲ್ಲಿ ಚಕ್ರ,ಶಂಖವನ್ನು ಧಾರಣೆ ಮಾಡಿಕೊಂಡು ತ್ರಿಶೂಲ ಧಾರಿಣಿಯಾಗಿ ಸರ್ವಾಲಂಕೃತ ಮಂಗಳೆ ಸಿಂಹವಾಹಿನಿಯಾಗಿ ವಿಜೃಂಭಿಸುತ್ತಿರುವಳು.

ಬರಹ ಕೃಪೆ: ಶ್ರೀ ಮಂಗಳಾದೇವಿ ದೇವಸ್ಥಾನ

Subscribe to our newsletter!

Other related posts

error: Content is protected !!