ಸ್ವಚ್ಛ ಶ್ರಮದಾನ ಹಾಗೂ ಫಿಟ್ನೆಸ್ ಕಾರ್ಯಕ್ರಮ

 ಸ್ವಚ್ಛ ಶ್ರಮದಾನ ಹಾಗೂ ಫಿಟ್ನೆಸ್ ಕಾರ್ಯಕ್ರಮ
Share this post

ಮಂಗಳೂರು, ಜನವರಿ 15, 2021: ಸ್ವಚ್ಛ ಶ್ರಮದಾನ ಹಾಗೂ ಫಿಟ್ನೆಸ್ ಕಾರ್ಯಕ್ರಮ ಜನವರಿ 17 ರಂದು ಬೆಳಿಗ್ಗೆ 7 ಗಂಟೆಯಿಂದ ನಗರದ ತೋಟ ಬೇಂಗ್ರೆಯ ಸನ್ ಸೆಟ್ ವೀವ್ ಪಾಯಿಂಟ್ ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮವುಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರೂ ಯುವ ಕೇಂದ್ರವು, ಮಹಾಜನ ಸಭಾ ಬೇಂಗ್ರೆ, ಬಾಸ್ಕ್‍ಯೊರ್ಬ್, ಸರ್ಫ್‍ಕ್ಲಬ್, ಝೂಸಿ ಫಿಟ್ನೆಸ್ ಕ್ಲಬ್, ವಿ ಆರ್ ಸೈಕ್ಲಿಂಗ್, ಸೈಕ್ಲಿಂಗ್ ಕ್ಲಬ್, ವಿ.ಡಿ.ಆರ್.ಎಫ್. ಅಭಿಸಾರನ್, ಬಿಗ್ ಬ್ಯಾಂಗ್, ಕಯಾಕ್‍ಬಾಯ್ ಹಾಗೂ ಬೀಚ್ ಪುನರ್ಯೌವನಗೊಳಿಸುವಿಕೆಯ ಸೈನ್ಯ ಮಂಗಳೂರು ಇವರ ಸಹಯೋಗದಲ್ಲಿ ನಡೆಯಲಿದೆ.

ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ನಗರ ಪಾಲಿಕೆಯ ಆಯುಕ್ತ ಆಕ್ಷಯ್ ಶ್ರೀಧರ್ ಹಾಗೂ ರಾಜ್ಯದ ರಿಸರ್ವ್ ಪೊಲೀಸ್ ಕಮಾಂಡೆಂಟ್ ಬಿ.ಎಂ. ಪ್ರಸಾದ್ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅಂದು ಬೆಳಿಗ್ಗೆ 6.30 ಗಂಟೆಗೆ ಮಂಗಳ ಸಭಾಂಗಣದಿಂದ ತೋಟ ಬೇಂಗ್ರೆಯವರೆಗೆ ಸೈಕಲ್ ಜಾಥಾ ನಡೆಯಲಿದೆ.

ಕ್ಯಾ. ಪಿರೋಝ್ ಪಾಶಾ ಅವರಿಂದ ಯೋಗ, ಬೀಚ್ ಕ್ಲೀನ್‍ಅಪ್ ಮತ್ತು ಶ್ರಮದಾನ ನಡೆಯಲಿದೆ.

ಸರ್ಫ್ ಕ್ಲಬ್ ನಿಂದ ಸರ್ಫಿಂಗ್, ಅಭಿಸಾರನ್ ಮತ್ತು ವಿ.ಟಿ.ಆರ್.ಎಫ್.ರಿಂದ ಸಿ.ಪಿ.ಆರ್.ಡೆಮೋ ಹಾಗೂ ಝಿಯೋಸ್ ನಿಂದ ಫಿಟ್ನೆಸ್ ಚಟುವಟಿಕೆ ನಡೆಯಲಿದೆ ಎಂದು ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!