ಜ. 13 ರಂದು ಮಹಾನಗರ ಪಾಲಿಕೆಯ ಆಯವ್ಯಯ- ಪೂರ್ವಭಾವಿ ಸಭೆ

 ಜ. 13 ರಂದು ಮಹಾನಗರ ಪಾಲಿಕೆಯ ಆಯವ್ಯಯ- ಪೂರ್ವಭಾವಿ ಸಭೆ
Share this post

ಮಂಗಳೂರು ಜನವರಿ 9, 2021: ಮಂಗಳೂರು ಮಹಾನಗರ ಪಾಲಿಕೆಯ ಪ್ರಸ್ತುತ ಸಾಲಿನ ಆಯವ್ಯಯ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಎರಡನೇ  ಸುತ್ತಿನ ಸಭೆಯು ಜನವರಿ 13 ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆಯ ಲಾಲ್ ಬಾಗ್ ಕೇಂದ್ರ ಕಚೇರಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.

ಆಯವ್ಯಯ ತಯಾರಿಕೆಗೆ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಸಭೆಗೆ ನೊಂದಾಯಿತ ವಸತಿ ಕ್ಷೇಮಾಭಿವೃದ್ದಿ ಸಂಘಗಳು, ನೊಂದಾಯಿತ ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳು ಹಾಗೂ ಜನ ಪ್ರತಿನಿಧಿಗಳು ಭಾಗವಹಿಸುವಂತೆ  ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!