ಜಾನಪದ- ವೈದಿಕ ಎರಡೂ ಒಂದೇ: ಕೆ ಎಲ್ ಕುಂಡಂತಾಯ

 ಜಾನಪದ- ವೈದಿಕ ಎರಡೂ ಒಂದೇ: ಕೆ ಎಲ್  ಕುಂಡಂತಾಯ
Share this post

ಮಂಗಳೂರು, ಜನವರಿ : 08, 2021: ಜಾನಪದ ಮತ್ತು ವೈದಿಕ ಪರಸ್ಪರ ವಿರೋಧವಲ್ಲ, ಅವೆರಡು ಒಂದೇ ಎಂದು ಖ್ಯಾತ ವಿದ್ವಾಂಸ ಕೆ. ಲಕ್ಷ್ಮೀನಾರಾಯಣ ಕುಂಡಂತಾಯ ಹೇಳಿದರು.

ಕದ್ರಿ ದೇಗುಲದ ಅರ್ಚಕ ವಿದ್ವಾನ್ ಪ್ರಭಾಕರ ಅಡಿಗರು ಬರೆದಿರುವ ಸಂಹಿತಾ- ಪದ- ಕ್ರಮ- ಜಟಾ- ಘನ ಪಾಠ ಸಹಿತವಾಗಿರುವ ಶ್ರೀ ಚಮಕಾಭರಣಮ್ ಕೃತಿಯನ್ನು ಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜಾನಪದ ಮತ್ತು ವೈದಿಕ ವಿರುದ್ಧ ದಿಕ್ಕಿನಲ್ಲಿದೆ ಎಂದು ವಾದ ನಡೆಯುತ್ತಲೇ ಬಂದಿದೆ. ಆದರೆ ಅವರೆರಡು ಸುಗಮ ಸಮಾಗಮವಾಗಿದೆ. ಅವೆರಡೂ ಒಂದೇ. ವೇದಕಾಲದಲ್ಲಿಯೇ ಚಾರ್ವಾಕನಂತಹ ವೇದ ವಿರೋದಿಗಳಿದ್ದರು. ಈ ಕಾಲದಲ್ಲಿ ವೇದ ವಿರೋಧ ದೊಡ್ಡ ವಿಚಾರವಲ್ಲ ಎಂದರು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕಬ್ಬಿಣ ಕಡಲೆಯಾದ ವೇದದ ಧರ್ಮಜ್ಞಾನವನ್ನು ದಾಸವರೇಣ್ಯರು ಸುಲಭ, ಸರಳರೂಪದಲ್ಲಿ, ವಚನಗಳ ಮೂಲಕ ಸಮಾಜಕ್ಕೆ ಪಸರಿಸಿದರು ಎಂದರು.

ವಿಕೃತವನ್ನೂ ವೈಭವೀಕರಿಸುವುದು, ವಿಷವನ್ನು ಹಂಚುವುದು ಸಾಹಿತ್ಯವಲ್ಲ. ಸದ್ವಿಚಾರ ಹಂಚುವುದೇ ಸಾಹಿತ್ಯ. ಇಂಥ ಕೃತಿಗಳು ಸದ್ವಿಚಾರ ಪಸರಿಸುತ್ತದೆ ಎಂದು ಹೇಳಿದರು.

ಕುಂಜತ್ತೋಡಿ ವಾಸುದೇವ ಅಲೆವೂರಾಯ, ಡಾ.ಸುಧೀಂದ್ರ, ಬಸವೇಶ್ವರ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಮಾತನಾಡಿದರು. ಪ್ರಕಾಶಕ ರಘುರಾಮಪ್ರಸಾದ್ ಪಿದಮಲೆ ಅವರನ್ನು ಅಭಿನಂದಿಸಲಾಯಿತು. ಅನುಪಮಾ ಅಡಿಗ ಇದ್ದರು.

ವಿದ್ವಾನ್ ಪ್ರಭಾಕರ ಅಡಿಗ ಕೃತಿ ಪರಿಚಯಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

Subscribe to our newsletter!

Other related posts

error: Content is protected !!