ಮತದಾರರ ಪಟ್ಟಿ: ಅವಧಿ ವಿಸ್ತರಣೆ
ಮಂಗಳೂರು,ಡಿ.29, 2023: ಭಾರತ ಚುನಾವಣಾ ಆಯೋಗವು 2024ರ ಜನವರಿ 1ರ ಅರ್ಹತಾ ದಿನಾಂಕದ ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ತಿದ್ದುಪಡಿ, ವಿಳಾಸ ಬದಲಾವಣೆ, ವಿವಿಧ ನಮೂನೆ ಅರ್ಜಿ ಫಾರ್ಮ್ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ.
ಪರಿಷ್ಕ್ರತ ವೇಳಾಪಟ್ಟಿಯಂತೆ ಆಕ್ಷೇಪಣೆಗಳ ವಿಲೇವಾರಿ ಅವಧಿಯನ್ನು 2024 ರ ಜನವರಿ 12ಕ್ಕೆ ವಿಸ್ತರಿಸಲಾಗಿದೆ. ದತ್ತಾಂಶಗಳ ಕ್ರೋಡೀಕರಣ ನವೀಕರಣ ಹಾಗೂ ಮುದ್ರಣ ಕಾರ್ಯದ ಅವಧಿಯನ್ನು ಜನವರಿ 17ಕ್ಕೆ ನಿಗದಿಪಡಿಸಲಾಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಣೆ ದಿನಾಂಕವನ್ನು ಜನವರಿ 22ಕ್ಕೆ ವಿಸ್ತರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.