ಕೃಷಿ ಪ್ರಶಸ್ತಿ-ಅರ್ಜಿ ಆಹ್ವಾನ

 ಕೃಷಿ ಪ್ರಶಸ್ತಿ-ಅರ್ಜಿ ಆಹ್ವಾನ
Share this post

ಉಡುಪಿ, ಆ 19, 2021: ಪ್ರಸಕ್ತ ಸಾಲಿನ ಕೃಷಿ ಇಲಾಖೆ ವತಿಯಿಂದ ಕೃಷಿ ಪ್ರಶಸ್ತಿ ಹಾಗೂ ರೈತರಿಗೆ ಉತ್ಪಾದನಾ ಬಹುಮಾನ ಕಾರ್ಯಕ್ರಮದಡಿ ಮುಂಗಾರು ಭತ್ತದ ಬೆಳೆ ಸ್ಪರ್ದೆಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ಪರ್ಧಾ ವಿಜೇತರಿಗೆ, ತಾಲೂಕುಮಟ್ಟದಲ್ಲಿ  ಪ್ರಥಮ ರೂ.15000, ದ್ವಿತೀಯ ರೂ 10000 ತೃತೀಯ 5000, ಜಿಲ್ಲಾ ಮಟ್ಟದಲ್ಲಿ ಪ್ರಥಮ ರೂ.30000, ದ್ವಿತೀಯ ರೂ 25000 ತೃತೀಯ ರೂ 20000 , ರಾಜ್ಯಮಟ್ಟದಲ್ಲಿ  ಪ್ರಥಮ ರೂ.50000, ದ್ವಿತೀಯ ರೂ 40000, ತೃತೀಯ ರೂ 35000 ಬಹುಮಾನವನ್ನು ರೈತರಿಗೆ ನೀಡಲಾಗುವುದು. 

ಆಸಕ್ತ ರೈತರು  ಅರ್ಜಿ ನಮೂನೆಯನ್ನು ಆಗಸ್ಟ್ 31 ರೊಳಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!