ಫಾಸ್ಟೇಕ್ ತರಬೇತಿ ಪಡೆಯಲು ಸೂಚನೆ

 ಫಾಸ್ಟೇಕ್ ತರಬೇತಿ ಪಡೆಯಲು ಸೂಚನೆ
Share this post

ಕಾರವಾರ ಆ. 18, 2021: ಆಹಾರ ಸಂಸ್ಕರಣಾ ಹಾಗೂ ಗುಣಮಟ್ಟ ಪ್ರಾಧಿಕಾರವು, ಆಹಾರ ಉತ್ಪಾದಕರು, ಮಾರಾಟಾಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲಾ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಫಾಸ್ಟೇಕ್ FoSTac ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯುವದನ್ನು ಕಡ್ಡಾಯಗೊಳಿಸಿದೆ.

ಆಹಾರ ಸೇವೆಗಳ ಗುಣಮಟ್ಟದ ಉದ್ದೇಶಗಳನ್ನು ತಿಳಿಸಿಕೊಡಲು ಹಾಗೂ ಸ್ವಚ್ಚತಾ ಕಾಳಜಿಯ ಉತ್ತೇಜನಕ್ಕಾಗಿ ಆಹಾರ ಉದ್ಯಮದ ಪ್ರತಿಯೊಬ್ಬ ವ್ಯಾಪಾರಸ್ಥರು ಈ ತರಬೇತಿಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಪ್ರಮಾಣ ಪತ್ರವನ್ನು ಪಡೆಯಬೇಕಾಗಿರುತ್ತದೆ.

ಎಲ್ಲಾ ಆಹಾರ ವಹಿವಾಟು ಉದ್ದಿಮೆದಾರರು ತರಬೇತಿಯೊಂದಿಗೆ ಎಫ್ ಎಸ್.ಎಸ್.ಎ.ಐ ಪರವಾನಿಗೆ ಅಥವಾ ನೊಂದಣಿ ಮಾಡಿಕೊಳ್ಳವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸೆಕ್ಷನ 63 ಪ್ರಕಾರ 5 ಲಕ್ಷದವರೆಗೆ ದಂಡ ಮತ್ತು 6 ತಿಂಗಳವರೆಗೆ ಕಾರಾಗೃಹವಾಸ ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಲು ಕಾನೂನಿನಲ್ಲಿ ಅವಕಾಶ ಇರುತ್ತದೆ.

ಫಾಸ್ಟೇಕ್ (FoSTac) ತರಬೇತಿಯನ್ನು ಎಲ್ಲಾ ಆಹಾರ ವಹಿವಾಟುದಾರರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರಿವು ಸರಕಾರ ಆದೇಶದಂತೆ ಬಾಹ್ಯ ಮೂಲ ಸಂಸ್ಥೆಯಾದ ಬೆಂಗಳೂರಿನ ಕೆರಿಯರ್ ಕ್ರೆಸ್ಟ್ ಕನ್ಸಲ್ಟೆನ್ಸಿ (M/s. Career Crest Consultancy) ಗೆ ವಹಿಸಿಕೊಟ್ಟಿದ್ದು, ಆನ್‍ಲೈನ್ /ಆಫ್‍ಲೈನ್ ಮೂಖಾಂತರ ನಿಗದಿತ ಶುಲ್ಕದೊಂದಿಗೆ ಪಾವತಿಸಿ, ಸಂಸ್ಥೆ ನಿಗದಿತಪಡಿಸಿರುವ ದಿನದಂದು ತರಬೇತಿಯಲ್ಲಿ ಭಾಹವಹಿಸಿ ಪ್ರಮಾಣಪತ್ರ ಪಡೆಯಬೇಕೆಂದು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾದ ಜಿಲ್ಲಾ ಅಂಕಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!