ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹಾಯಧನ

 ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸಹಾಯಧನ
Share this post

ಉಡುಪಿ, ಆ 18, 2021: ವಿವಿಧ ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳ ಸ್ಥಾಪನೆ, ಉನ್ನತೀಕರಣಕ್ಕೆ ಕೇಂದ್ರ
ಸರ್ಕಾರದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಬಹುದು.

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕೆ ಒಟ್ಟು ವೆಚ್ಚದ ಶೇ. 35 ರಂತೆ ಗರಿಷ್ಟ ರೂ. 10 ಲಕ್ಷ ಸಹಾಯಧನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸದಾಗಿ ನಿರ್ಮಾಣ ಮಾಡುವ ತೋಟಗಾರಿಕೆ ಬೆಳೆಗಳ ಪ್ರಾಥಮಿಕ
ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ. 40 ರಂತೆ ಗರಿಷ್ಟ ರೂ. 10 ಲಕ್ಷ ಸಹಾಯಧನ ಸಿಗುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ದ್ವಿತಿಯ ಹಂತದ ಸಂಸ್ಕರಣೆಗಳನ್ನು ಕೈಗೊಳ್ಳುವ ರೂ. 50 ಲಕ್ಷಕ್ಕಿಂತ ಅಧಿಕ ಬಂಡವಾಳವನ್ನು ತೊಡಗಿಸಿರುವ ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ. 25 ರಂತೆ ಗರಿಷ್ಟ ರೂ. 50 ಲಕ್ಷ ಸಹಾಯಧನ, ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯಡಿ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲದ ಮೇಲಿನ ವಾರ್ಷಿಕ ಶೇ. 9 ರ ಬಡ್ಡಿಗೆ ಶೇ. 3 ರ ಬಡ್ಡಿ ಸಹಾಯಧನ ಹಾಗೂ ರೂ. 2 ಕೋಟಿಯವರೆಗೆ ಪಡೆಯುವ ಸಾಲಕ್ಕೆ ಖಾತರಿ ಸೌಲಭ್ಯ ದೊರಕುತ್ತದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ಜಿಲ್ಲೆ: 0820-2531950,ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837, ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು (ಜಿ.ಪಂ.),ಕುಂದಾಪುರ ತಾಲೂಕು: 08254-230813 ,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
(ಜಿ.ಪಂ.), ಕಾರ್ಕಳ ತಾಲೂಕು: 08258-230288 ಅವರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು, ಜಿಲ್ಲಾ
ಪಂಚಾಯತ್ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!