ವಿವಿ ಸಂಧ್ಯಾ ಕಾಲೇಜು: ನಾಗೇಶ್ ಅವರಿಗೆ ಬೀಳ್ಕೊಡುಗೆ

 ವಿವಿ ಸಂಧ್ಯಾ  ಕಾಲೇಜು: ನಾಗೇಶ್ ಅವರಿಗೆ ಬೀಳ್ಕೊಡುಗೆ
Share this post

ಮಂಗಳೂರು, ಆ 01, 2021: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಗೇಶ್ ಅವರ ಬೀಳ್ಕೊಡುಗೆ ಸಮಾರಂಭವು ಶುಕ್ರವಾರದಂದು ಕಾಲೇಜಿನ ಶಿವರಾಮ ಕಾರಂತ ಸಂಭಾಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ್, ವೃತ್ತಿ ಜೀವನದಲ್ಲೂ ಉತ್ತಮವಾದ ಭಾವನಾತ್ಮಕ ಸಂಬಂಧಗಳು ಬೆಳೆಯುತ್ತವೆ. ಅಂತಹ ಸಂಬಂಧಗಳು ನಮ್ಮ ಜೀವನದಲ್ಲಿ ಇನ್ನಷ್ಟು ಮೌಲ್ಯಗಳನ್ನು ಕಲಿಸಿಕೊಡುತ್ತವೆ. ನಾಗೇಶ್‍ರವರು ಇದ್ದಕ್ಕೆ ಉತ್ತಮ ಉದಾಹರಣೆ ಎಂದರು.

ಈ ಸಂದರ್ಭದಲ್ಲಿ ನಾಗೇಶ್ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಂಬಿಎ-ಎಂಕಾಂನ ಸಂಯೋಜಕ ಡಾ. ಜಗದೀಶ್ ಬಿ., ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ., ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಕ ವಿಜ್ಞಾನ ವಿಭಾಗ ಉಪನ್ಯಾಸಕಿ ಲತಾ ಕೆ.ವಿ. ಸ್ವಾಗತಿಸಿ, ವಾಣಿಜ್ಯ ವಿಭಾಗ ಉಪನ್ಯಾಸಕ ರಾಘವೇಂದ್ರ ವಂದಿಸಿದರು, ಕನ್ನಡ ಉಪನ್ಯಾಸಕಿ ದುರ್ಗಾ ಮೆನನ್ ಪ್ರಾಸ್ತಾವನೆಗೈದು, ಆಂಗ್ಲ ವಿಭಾಗ ಉಪನ್ಯಾಸಕಿ ಜೋಯ್ಸ್ ವಿರೇಂದ್ರಿತ ನಿರೂಪಿಸಿದರು.

Subscribe to our newsletter!

Other related posts

error: Content is protected !!