ಮಂಗಳೂರು: ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ವ್ರತ

 ಮಂಗಳೂರು: ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ವ್ರತ
Share this post

ಮಂಗಳೂರು, ಜುಲೈ 19, 2021 : ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ಹಾಗೂ ಪರಿವಾರ ದೇವರುಗಳ ಚಾತುರ್ಮಾಸ ವ್ರತ ಆಚರಣೆ ಪ್ರಯುಕ್ತ ಇಂದು ಪ್ರಾಥ: ಕಾಲ ಶ್ರೀದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ ನಡೆಯಿತು.

ಬಳಿಕ ಶ್ರೀ ದೇವರಿಗೆ ಪಂಚಾಮೃತ , ಪುಳಕಾಭಿಷೇಕ , ಪವಮಾನಾಭಿಷೇಕ , ಬಳಿಕ ವೈದಿಕರಿಂದ ಶತ ಕಲಶಾಭಿಷೇಕ ನೆರವೇರಿತು. ಮಧ್ಯಾಹ್ನ ಮಹಾ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಹಾಗೂ ಭಜಕರು ಉಪಸ್ಥಿತರಿದ್ದರು.

ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!