ಉತ್ತರ ಕನ್ನಡ: ಪ್ರೇಕ್ಷಣಿಯ ಸ್ಥಳಗಳ ವಿಕ್ಷಣೆಗೆ ವಿಶೇಷ ಸಾರಿಗೆ ವ್ಯವಸ್ಥೆ

 ಉತ್ತರ ಕನ್ನಡ: ಪ್ರೇಕ್ಷಣಿಯ ಸ್ಥಳಗಳ ವಿಕ್ಷಣೆಗೆ ವಿಶೇಷ ಸಾರಿಗೆ ವ್ಯವಸ್ಥೆ
Share this post

ಕಾರವಾರ ಜುಲೈ 19, 2021: ವಿಶ್ವ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಾದ ಜೋಗ ಜಲಪಾತ ಮತ್ತು ಮುರ್ಡೇಶ್ವರ ವೀಕ್ಷೆಣೆಗಾಗಿ ಸಂಚರಿಸಲಿಚ್ಚಿಸುವ ಪ್ರಯಾಣಿಕರಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗ ಪ್ರತಿ ಶನಿವಾರ ಮತ್ತು ಭಾನುವಾರ ವಿಶೇಷ ಸಾರಿಗೆ ಬಸ್‍ಗಳ ಓಡಾಟದ ಪ್ಯಾಕೆಜ್‍ನ್ನು ಪ್ರಾರಂಭಿಸಲಿದೆ.

ಈ ಪ್ಯಾಕೇಜ್ ಜುಲೈ 24ರಿಂದ ಪ್ರಾರಂಭವಾಗಲಿದೆ ಎಂದು ವಾಕರಸಾ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ರಾಜ್‍ಕುಮಾರ್ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.

ಕಾರವಾರ- ಜೋಗ:

ಕಾರವಾರದಿಂದ ಬೆಳಿಗ್ಗೆ 8ಕ್ಕೆ ಹೊರಡಲಿರುವ ಬಸ್ 9ಕ್ಕೆ ಅಂಕೋಲಾ, 10ಕ್ಕೆ ಕುಮಟಾ, 10.30ಕ್ಕೆ ಹೊನ್ನಾವರ ತಲುಪಲಿದ್ದು, ಮಾರ್ಗ ಮಧ್ಯದ ಮಿರ್ಜಾನ ಕೋಟೆ ಹಾಗೂ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನ ಭೇಟಿ ಜೊತೆಗೆ ಮಧ್ಯಾಹ್ನ 12.30ಕ್ಕೆ ಜೋಗಫಾಲ್ಸ್‍ಗೆ ತಲುಪುತ್ತದೆ. ನಂತರ ಪ್ರಯಾನಿಕರಿಗೆ ಜೋಗಫಾಲ್ಸ್ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶವಿದ್ದು, ಸಂಜೆ 4:30ಕ್ಕೆ ಬಸ್ ಜೋಗಫಾಲ್ಸ್‍ನಿಂದ ಮರಳಿ ನಿರ್ಗಮಿಸಲಿದೆ. 400 ರೂ ಟಿಕೆಟ್ ದರವನ್ನು ನಿಗಧಿ ಪಡಿಸಲಾಗಿದೆ.

ಯಲ್ಲಾಪುರ- ಜೋಗ:

ಯಲ್ಲಾಪುರದಿಂದ ಜೋಗಫಾಲ್ಸ್‍ಗೆ ಬೆಳಿಗ್ಗೆ 8ಕ್ಕೆ ಹೊರಡುವ ಬಸ್ 10ಕ್ಕೆ ಶಿರಸಿ, 10.45ಕ್ಕೆ ಸಿದ್ದಾಪುರ ತಲುಪಲಿದ್ದು, ಮಾರ್ಗ ಮಧ್ಯದ ಶಿರಸಿಯ ಮಾರಿಕಾಂಬಾ ದೇವಸ್ಥಾನ ಹಾಗೂ ನಿಪ್ಪಲಿ ಫಾಲ್ಸ್ ವೀಕ್ಷಣೆಯೊಂದಿಗೆ ಮಧ್ಯಾಹ್ನ 12.30ಕ್ಕೆ ಜೋಗಫಾಲ್ಸ್‍ಗೆ ತಲುಪುತ್ತದೆ. ನಂತರ ಪ್ರಯಾಣಿಕರಿಗೆ ಜೋಗಫಾಲ್ಸ್ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶವಿದ್ದು, ಸಂಜೆ 4.30ಕ್ಕೆ ಬಸ್ ಮರಳಿ ಜೋಗಫಾಲ್ಸ್‍ನಿಂದ ಬರಲಿದೆ. ಯಲ್ಲಾಪುರದಿಂದ ಜೋಗಕ್ಕೆ ಪ್ರತೀ ಪ್ರಯಾಣಿಕರಿಗೆ ಹೋಗುವ-ಬರುವ ಸೇರಿದಂತೆ ಒಟ್ಟು 250 ರೂ ಟಿಕೆಟ್ ದರ ನಿಗಧಿ ಪಡಿಸಲಾಗಿದೆ.

ಕಾರವಾರ- ಮುರ್ಡೇಶ್ವರ

ಕಾರವಾರದಿಂದ ಮುರ್ಡೇಶ್ವರಕ್ಕೆ ಬೆಳಿಗ್ಗೆ 8ಕ್ಕೆ ಹೊರಡುವ ಬಸ್ 9ಕ್ಕೆ ಅಂಕೋಲಾ, 10ಕ್ಕೆ ಕುಮಟಾ, 10.30ಕ್ಕೆ ಹೊನ್ನಾವರ ತಲಿಪಲಿದ್ದು, ಮಾರ್ಗ ಮಧ್ಯದ ಮಿರ್ಜಾನ ಕೋಟೆ ಹಾಗೂ ಇಕೋ ಬೀಚ್ ವೀಕ್ಷಣೆಯೊಂದಿಗೆ ಮಧ್ಯಾಹ್ನ 12.30ಕ್ಕೆ ಮುರ್ಡೇಶ್ವರ ತಲುಪುತ್ತದೆ. ನಂತರ ಪ್ರಯಾನಿಕರಿಗೆ ಮುಡೇಶ್ವರ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶವಿದ್ದು, ಸಂಜೆ 4:30ಕ್ಕೆ ಬಸ್ ಮುಡೇಶ್ವರದಿಂದ ಮರಳಿ ನಿರ್ಗಮಿಸುತ್ತದೆ. ಕಾರವಾರದಿಂದ ಮುರ್ಡೇಶ್ವರಕ್ಕೆ ಪ್ರತೀ ಪ್ರಯಾಣಿಕರಿಗೆ 300 ರೂ ಟಿಕೆಟ್ ದರ ನಿಗಧಿ ಪಡಿಸಲಾಗಿದೆ.

ಈ ವಿಶೇಷ ಪ್ಯಾಕೇಜ್‍ನ ಸಾರಿಗೆಯಲ್ಲಿ ಪ್ಯಾಕೆಜ್ ಟೂರ್ ಪ್ರಯಾಣಿಕರನ್ನು ಹೊರತುಪಡಿಸಿ ಇತರೆ ಪ್ರಯಾಣಿಗೆ ಅವಕಾಶವಿರುವುದಿಲ್ಲ. ಈ ವಿಶೇಷ ಬಸ್‍ಗಳ ಮುಂಗಡ ಟಿಕೇಟ್ ಬುಕ್ಕಿಂಗ್‍ಗಾಗಿ ತಿತಿತಿ.ಞsಡಿಣಛಿ.iಟಿನಲ್ಲಿ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಪ್ರಯಾಣಿಕರು ವಿಶೇಷ ಪ್ಯಾಕೆಜ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ.

Subscribe to our newsletter!

Other related posts

error: Content is protected !!