ಮೇ ಮಾಹೆಯ ಪಡಿತರ ವಿತರಣೆ

 ಮೇ ಮಾಹೆಯ ಪಡಿತರ ವಿತರಣೆ
Share this post

ಕಾರವಾರ ಮೇ 13, 2021: ಉತ್ತರ ಕನ್ನಡ ಜಿಲ್ಲೆಯಲ್ಲಿ ಪಡಿತರ ಫಲಾನುಭವಿಗಳಿಗೆ ಎನ್‍ಎಫ್‍ಎಸ್‍ಎ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ ತಿಂಗಳ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್‍ಎಫ್‍ಎಸ್‍ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ, ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯದ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಚೀಟಿದಾರರು ಪಡೆದುಕೊಳ್ಳಬಹುದು. ನ್ಯಾಯಬೆಲೆ ಅಂಗಡಿಕಾರರು ವಿತರಣೆಯಾಗುವ ಆಹಾರಧಾನ್ಯ ಕಡಿಮೆ ಪ್ರಮಾಣದಲ್ಲಿ ನೀಡಿದರೆ ಸಾರ್ವಜನಿಕರು ಈ ಕೆಳಗೆ ನೀಡಲಾದ ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ ದೂರು ಸಲ್ಲಿಸಬಹುದಾಗಿರುತ್ತದೆ.

 • ಕಾರವಾರ (9448609712) (08382-226331)
 • ಅಂಕೋಲಾ (9448611354) (08388-230243)
 • ಕುಮಟಾ (9481557642) (08386-222054)
 • ಹೊನ್ನಾವರ (9980135812) (08387-220262)
 • ಭಟ್ಕಳ (8105180342) (08385-226422)
 • ಶಿರಸಿ (9739717754) (08384-226383)
 • ಸಿದ್ದಾಪುರ (8861641607) (08389-230127)
 • ಯಲ್ಲಾಪುರ (9972445941) (08419-261129)
 • ಮುಂಡಗೋಡ (9448893878) (08301-222122)
 • ಹಳಿಯಾಳ (7483441715) (08284-220134)
 • ದಾಂಡೇಲಿ (9741440666)
 • ಜೋಯಿಡಾ (8310587169) (08383-282723) ಸಂಪರ್ಕಿಸಬಹುದಾಗಿರುತ್ತದೆ.

ತಪ್ಪು ಎಸಗುವ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!